೧. ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸು
- Ø ಹೋಲಿಕೆ ಮಾಡುವುದು ನಮ್ಮ ವೈಯಕ್ತಿಕ ಪಥವನ್ನು ಮರೆಮಾಡುತ್ತದೆ. ಪ್ರತಿಯೊಬ್ಬರ ಜೀವನದ ವೇಗ, ಗುರಿ, ಗ್ರಹಿಕೆ, ಶಕ್ತಿ, ಸಾಮರ್ಥ್ಯ ಮತ್ತು ಹಿನ್ನಲೆ ವಿಭಿನ್ನವಾಗಿರುತ್ತದೆ.
- Ø ನೀನು ಎಲ್ಲಿ ಇದ್ದೀಯ, ಎಷ್ಟು ಬೆಳೆಯುತ್ತಿದ್ದೀಯ ಎಂಬುದನ್ನು ಗುರುತಿಸು.
- Ø ನಿನ್ನ ಬೆಳವಣಿಗೆಗೆ ಹೋಲಿಕೆಯ ಬದಲು ಪ್ರೇರಣೆಯಾಗಿ ಇತರರನ್ನು ನೋಡು.
೨. ಧನಾತ್ಮಕ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ
- Ø ಧನಾತ್ಮಕತೆ ಹರಡುವ ಶಕ್ತಿ ಹೊಂದಿದೆ.
- Ø ನಿನ್ನ ಕನಸುಗಳನ್ನು ಗೌರವಿಸುವ, ನಿನ್ನ ಶಕ್ತಿಗಳನ್ನು ಗುರುತಿಸುವ ಜನರೊಂದಿಗೆ ಇರಲು ಪ್ರಯತ್ನಿಸು. ಅಂತಹ ಸಾನ್ನಿಧ್ಯವು ನಿನ್ನ ಆತ್ಮವಿಶ್ವಾಸಕ್ಕೆ ಪೋಷಣೆಯಂತೆ ಕೆಲಸ ಮಾಡುತ್ತದೆ.
೩. ದೇಹದ ಆರೈಕೆ ಮಾಡು
- Ø ಆರೋಗ್ಯವು ಆತ್ಮವಿಶ್ವಾಸದ ಮೂಲಭೂತ ಅಂಶ.
- Ø ನಿತ್ಯ ವ್ಯಾಯಾಮ, ಸಮತೋಲನ ಆಹಾರ, ಮತ್ತು ನಿದ್ರೆ—ಇವು ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸುತ್ತವೆ. ನಿನ್ನ ದೇಹವನ್ನು ಗೌರವಿಸುವುದು ನಿನ್ನನ್ನು ಒಳಗಿನಿಂದ ಬಲಿಷ್ಠಗೊಳಿಸುತ್ತದೆ.
೪. ನಿನ್ನ ಮೇಲೆ ದಯೆ ಇರಿಸು
- Ø ತಪ್ಪುಗಳು ಜೀವನದ ಭಾಗ. ಅವುಗಳಿಂದ ಕಲಿಯುವುದು ಬೆಳವಣಿಗೆಯ ಸಂಕೇತ.
- Ø ನಿನ್ನೊಳಗಿನ ಆತ್ಮಸ್ನೇಹಿತನನ್ನು ಬೆಳೆಸಿಕೋ.
- Ø "ನಾನು ಪ್ರಯತ್ನಿಸುತ್ತಿದ್ದೇನೆ" ಎಂಬ ನುಡಿಯನ್ನು " ನಾನು ವಿಫಲನಾದೆ " ಎಂಬ ನುಡಿಯ ಬದಲು ಬಳಸು.
೫. ಧನಾತ್ಮಕ ಸ್ವಯಂ ಮಾತು (ಸ್ವಭಾಷಣ) ಅಭ್ಯಾಸ ಮಾಡು
- Ø ನಿನ್ನೊಳಗಿನ ಮಾತುಗಳು ನಿನ್ನ ನಂಬಿಕೆಯನ್ನು ರೂಪಿಸುತ್ತವೆ.
- Ø "ನಾನು ಮಾಡಬಲ್ಲೆ" ಎಂಬ ನುಡಿಗಳು ನಿನ್ನ ಮನಸ್ಸಿನ ಧ್ವನಿಯಾಗಲಿ.
- Ø ಋಣಾತ್ಮಕ ಚಿಂತನೆಗಳನ್ನು ಪ್ರಶ್ನಿಸಿ, ಅವುಗಳ ಹಿಂದಿರುವ ನಿಜವನ್ನು ಪರಿಶೀಲಿಸು.
೬. ಭಯಗಳನ್ನು ಎದುರಿಸು
- Ø ಭಯವನ್ನು ಎದುರಿಸುವುದು ಆತ್ಮವಿಶ್ವಾಸದ ಬಾಗಿಲು.
- Ø ಪ್ರತಿ ಸಣ್ಣ ಹೆಜ್ಜೆ ನಿನ್ನ ಧೈರ್ಯವನ್ನು ಹೆಚ್ಚಿಸುತ್ತದೆ.
- Ø ಅಸಹಜ ಪರಿಸ್ಥಿತಿಗಳಲ್ಲಿ ನಿನ್ನ ಶಕ್ತಿಯನ್ನು ಕಂಡುಕೊಳ್ಳುವ ಅವಕಾಶವಿದೆ.
೭. ನಿನ್ನ ಶಕ್ತಿಯ ಕ್ಷೇತ್ರಗಳಲ್ಲಿ ತೊಡಗಿಕೋ
- Ø ನಿನ್ನ ಶಕ್ತಿಗಳನ್ನು ಬಳಸುವಾಗ ನಿನ್ನೊಳಗಿನ ಶ್ರದ್ಧೆ ಬೆಳೆಯುತ್ತದೆ.
- Ø ಪ್ರತಿದಿನ ನಿನ್ನ ಸಾಮರ್ಥ್ಯವನ್ನು ಸವಾಲು ಮಾಡು, ಹೊಸ ಗುರಿಗಳನ್ನು ಹೊಂದು.
- Ø ನಿನ್ನ ಕೌಶಲ್ಯಗಳು ನಿನ್ನ ಆತ್ಮವಿಶ್ವಾಸಕ್ಕೆ ಆಧಾರವಾಗುತ್ತವೆ.
೮. “ಇಲ್ಲ” ಎನ್ನುವ ಸಮಯವನ್ನು ಅರಿತುಕೋ
- Ø "ಇಲ್ಲ" ಎನ್ನುವುದು ಸ್ವಯಂ ಗೌರವದ ಸಂಕೇತ.
- Ø ನಿನ್ನ ಸಮಯ, ಶಕ್ತಿ, ಮತ್ತು ಮೌಲ್ಯಗಳನ್ನು ಕಾಪಾಡಲು ಈ ಶಬ್ದವನ್ನು ಧೈರ್ಯದಿಂದ ಬಳಸು.
೯. ವಾಸ್ತವಿಕ ಗುರಿಗಳನ್ನು ನಿಗದಿ ಪಡಿಸಿಕೊಳ್ಳಿ
- Ø ಸಾಧ್ಯವಾದ ಗುರಿಗಳು ನಿನ್ನನ್ನು ಪ್ರೇರೇಪಿಸುತ್ತವೆ, ನಿರಂತರ ಚಟುವಟಿಕೆಗೆ ದಾರಿ ಮಾಡುತ್ತವೆ.
- ಪ್ರತಿ ಸಾಧನೆಯು ನಿನ್ನ ಆತ್ಮವಿಶ್ವಾಸವನ್ನು ಪುನಃ ದೃಢಪಡಿಸುತ್ತದೆ.
- Ø ಅಸಾಧ್ಯ ಗುರಿಗಳನ್ನು ಪುನರ್ಮೌಲ್ಯಮಾಪನ ಮಾಡು, ಅವುಗಳನ್ನು ಹಂತ ಹಂತವಾಗಿ ಸಾಧಿಸಬಹುದಾದ ಗುರಿಗಳಾಗಿ ರೂಪಿಸು.
ಆಂಗ್ಲ ಮೂಲ: Amy Morin, LCSW
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ