ಒಬ್ಬ ತನ್ನ ಪ್ರೀತಿಯ ಕತ್ತೆಯ ಜೊತೆ ಹೋಗುತ್ತಿದ್ದ. ಬೆಟ್ಟ ಗುಡ್ಡಗಳ ನಡುವೆ ಕತ್ತೆ ತನ್ನ ಬೆನ್ನ ಮೇಲೆ ಭಾರವಾದ ತನ್ನೊಡೆಯನ ವಸ್ತುಗಳನ್ನು ಹೊತ್ತಿತ್ತು. ಆಕಸ್ಮಿಕವೆಂಬಂತೆ ಕತ್ತೆ ಅಷ್ಟೇನೂ ದೊಡ್ಡದಲ್ಲದ ಕಮರಿಗೆ ಬಿತ್ತು. ಪ್ರಿಯ ಕತ್ತೆ ಕಮರಿಗೆ ಬಿದ್ದಿದೆ. ಅದನ್ನು ಎತ್ತುವ ಸರ್ವ ಪ್ರಯತ್ನವನ್ನೂ ಅವನು ಮಾಡಿದ. ಸಾಕಷ್ಟು ಸಮಯ ವ್ಯರ್ಥವಾಯಿತು. ಕತ್ತಲಾಗುವ ಸಮಯವೂ ಬರುತ್ತಿತ್ತು. ಅವನು ಎಷ್ಟೇ ಪ್ರಯತ್ನಿಸಿದರೂ ಅದನ್ನು ಹೊರತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ಅದನ್ನು ಜೀವಂತವಾಗಿ ಮಣ್ಣು ಮಾಡಲು, ಹೂಳಲು ನಿರ್ಧರಿಸುತ್ತಾನೆ.
ಕಮರಿಯ
ಮೇಲಿನಿಂದ ಕತ್ತೆಯ ಮೇಲೆ ಮಣ್ಣು ಹಾಕುತ್ತಾನೆ.
ಕತ್ತೆ ಬೆನ್ನ ಮೇಲೆ ಬೀಳುವ ಮಣ್ಣಿನಿಂದ
ಕಸಿವಿಗೊಂಡು ಬೆನ್ನನ್ನು ಅಲ್ಲಾಡಿಸುತ್ತದೆ ಮತ್ತು ಅದರ ಮೇಲೆ ಹೆಜ್ಜೆ
ಇಡುತ್ತದೆ. ಪ್ರತಿ ಸಾರಿಯೂ ಬೆನ್ನಿನೆ ಮೇಲೆ ಮಣ್ಣು ಸುರಿದಾಗ
ಅದು ಅಲ್ಲಾಡಿಸಿ ಕೆಳಗೆ ಬೀಳಿಸುತ್ತದೆ. ಹೀಗೆ ಹಲವು ಸಮಯ
ಕಳೆಯಿತು. ಆಶ್ಚರ್ಯವೆಂದರೆ ಅದು ನಿದಾನವಾಗಿ ಕಮರಿಯಿಂದ
ಮೇಲೆ ಬರುತ್ತಿತ್ತು. ಕೊನೆಗೆ ಅದು ಕಮರಿಯಿಂದ ಮೇಲೆ
ಬಂದಿತು. ಕತ್ತೆಯ ಯಜಮಾನನಿಗೆ ಖುಷಿಯಾಯಿತು.
👉ನೈತಿಕ
ಪಾಠ (Moral of the Story)
ಸಮಸ್ಯೆಗಳು
ನಮಗೆ ಕಷ್ಟಗೀಡುಮಾಡಲು ಬರುತ್ತದೆ ಎಂಬ ದೃಷ್ಠಿಕೋನವನ್ನು ಬದಲಿಸಿ, ಅವುಗಳ ಮೂಲಕ ಪಾಠ ಕಲಿತು ಬೆಳವಣಿಗೆಯ
ಮೆಟ್ಟಿಲು ಕಟ್ಟಬೇಕು.
👉 ತೊಂದರೆಗಳನ್ನು ತಳ್ಳಿ ಹಾಕಿ, ಅವುಗಳಿಂದ ಪಾಠ ಕಲಿಯಿರಿ. ಪ್ರತಿಯೊಂದು
ಆಪತ್ತೂ ಮುಂದಿನ ಹಂತ ತಲುಪಲು ಒಂದು ಹೆಜ್ಜೆಯಾಗಬಹುದು.
Source: https://4recruitmentservices.com/15-motivational-short-stories
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ