ಕಥೆ ಹೇಳುವಿಕೆ (Story Telling) ಕೇವಲ ಮನರಂಜನೆಗೆ ಮಾತ್ರವಲ್ಲ—ಅದು ಭಾವನಾತ್ಮಕ ಔಷಧಿ, ಬೌದ್ಧಿಕ ಬೆಳವಣಿಗೆ ಮತ್ತು ಸಮಾಜದ ವಿಭಿನ್ನ ಜನರ ಸಂಪರ್ಕಕ್ಕೆ ಶಕ್ತಿಯುತ ಸಾಧನವಾಗಿದೆ. ಮಾತು, ಬರವಣಿಗೆ ಅಥವಾ ಕಲೆಯ ಮೂಲಕ ಹಂಚುವ ಕಥೆಗಳು ನಮ್ಮ ಹಾಗೂ ಬೇರೆಯವರ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಜನರ ಮಾನಸಿಕ ಆರೋಗ್ಯವನ್ನು ರೂಪಿಸುತ್ತವೆ.
ಕಥೆ ಹೇಳುವಿಕೆಯ ಮನೋವಿಜ್ಞಾನ:
ನಿರೂಪಣಾ
ಮನಶಾಸ್ತ್ರ (Narrative Psychology) ಪ್ರಕಾರ, ನಾವು ನಮ್ಮ ಜೀವನದ
ಕಥೆಗಳನ್ನು ಹೇಗೆ ಹೇಳುತ್ತೇವೆ ಎಂಬುದು
ನಮ್ಮ ಮನಸ್ಸಿನ ಸ್ಥಿತಿಗೆ ಪ್ರಭಾವ ಬೀರುತ್ತದೆ. ಡಾ. ಆನಿ ಬ್ರೂಸ್ಟರ್ (Dr. Annie
Brewster) ಅವರ Health
Story Collaborative ಸಂಸ್ಥೆಯು,
ಕಥೆ ಹೇಳುವಿಕೆ ಸಂಪರ್ಕವನ್ನು ಬೆಳೆಸುತ್ತದೆ ಮತ್ತು ದುಃಖ ಅಥವಾ ರೋಗದ
ಅನುಭವಗಳನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ ಎಂದು
ಹೇಳುತ್ತದೆ.
ಕಥೆ ಹೇಳುವಿಕೆಯಿಂದ ಉಂಟಾಗುವ ಲಾಭಗಳು:
- ಕೇಳುವಿಕೆ ಮತ್ತು ಕಲ್ಪನೆಯ ಶಕ್ತಿಯನ್ನು ಹೆಚ್ಚಿಸುತ್ತದೆ:
ಕಥೆಗಳಲ್ಲಿ ತೊಡಗುವಿಕೆ ಗಮನವನ್ನು ಹೆಚ್ಚಿಸುತ್ತದೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. - ಸಹಾನುಭೂತಿ ಮತ್ತು ಸ್ಮರಣಶಕ್ತಿಗೆ ಉತ್ತೇಜನ:
ಕಥೆಗಳು ದೇಹದಲ್ಲಿ ಆಕ್ಸಿಟೋಸಿನ್ (oxytocin) ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಸಂಬಂಧಗಳನ್ನು ಗಾಢಗೊಳಿಸುತ್ತದೆ. - ಮನೋಭಾವವನ್ನು ಉತ್ತಮಗೊಳಿಸುತ್ತದೆ:
ಸಕಾರಾತ್ಮಕ ಕಥೆಗಳು ಭಾವನೆಗಳನ್ನು ಬದಲಾಯಿಸುತ್ತವೆ, ಧೈರ್ಯವನ್ನು ಹೆಚ್ಚಿಸುತ್ತವೆ. - ಮೂಢಾವಸ್ಥೆ ನಿರ್ವಹಣೆಗೆ ಸಹಾಯ:
ನೆನಪಿನ ಚಿಕಿತ್ಸೆಯು ಹಿರಿಯರಲ್ಲಿನ ಸ್ಮರಣಶಕ್ತಿಗೆ ಸಹಾಯ ಮಾಡುತ್ತದೆ. - ಸಂವಹನ ಕೌಶಲ್ಯವನ್ನು ಬೆಳೆಸುತ್ತದೆ:
ತಮ್ಮ ವಿಚಾರಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ವಿಜ್ಞಾನಿಗಳೂ ಸಹ ಕಥೆ ಹೇಳುವಿಕೆಯನ್ನು ಬಳಸುತ್ತಿದ್ದಾರೆ. - ಯಶಸ್ಸು ಮತ್ತು ವಿಫಲತೆಯಿಂದ ಬಲವರ್ಧನೆ:
ಹಳೆಯ ಅನುಭವಗಳನ್ನು ಪುನರ್ವ್ಯಾಖ್ಯಾನ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚುತ್ತದೆ.
ನಿಮ್ಮ ಕಥೆಯನ್ನು ಪುನರ್ರಚನೆ ಮಾಡುವುದು:
ನಿರೂಪಣಾ
ಮನಶಾಸ್ತ್ರ (Narrative Psychology) ವು ವ್ಯಕ್ತಿಗೆ
ತಮ್ಮ ನಂಬಿಕೆಗಳನ್ನು ಪ್ರಶ್ನಿಸಲು ಮತ್ತು ಹೊಸ ದೃಷ್ಟಿಕೋನದಿಂದ ತಮ್ಮ
ಕಥೆಗಳನ್ನು ನಿರೂಪಣೆಯ ಮೂಲಕ ರೂಪಿಸಲು ಪ್ರೇರೇಪಿಸುತ್ತದೆ. ಕಥೆಯ ಮೂಲಕ ದುಃಖದೊಳಗಿನ ಅರ್ಥವನ್ನು ಹುಡುಕುವವರ ನೋವಿಗೆ ಸಮಾಧಾನ ಹಾಗೂ ಹೆಚ್ಚು
ಸುಖವಾಗಿ ಬದುಕುತ್ತಾರೆ.
ಕೊನೆಯ ಮಾತು:
ಕಥೆ
ಹೇಳುವಿಕೆ ನಮ್ಮನ್ನು ಜನರೊಂದಿಗೆ ಬೆಸೆಯುತ್ತದೆ, ಪ್ರತಿಬಿಂಬಿಸುತ್ತದೆ ಮತ್ತು ಬೆಳೆಯುವಂತೆ ಮಾಡುತ್ತದೆ. ನಾವು ನಮ್ಮ ಕಥೆಗಳನ್ನು
ಹಂಚಿಕೊಳ್ಳುವಾಗ ಮತ್ತು ಇತರರ ಕಥೆಗಳನ್ನು ಕೇಳುವಾಗ,
ನಾವು ವ್ಯಕ್ತಿಗತವಾಗಿ ಹಾಗೂ ಸಾಮೂಹಿಕವಾಗಿ
ಧನಾತ್ಮಕತೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು
ನಮ್ಮ ಸ್ವಂತ ಮನಸ್ಸನ್ನು ಆರೋಗ್ಯಕರವಾಗಿ ಪೋಷಿಸುತ್ತೇವೆ.
ಆಂಗ್ಲ
ಮೂಲ: Barbara Field ("Verywell
Mind")
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ