ಶುಕ್ರವಾರ, ಜುಲೈ 24, 2020

"ನಿಮ್ಮ ಸ್ವಂತ ಗುರಿಗಳನ್ನು ಗೊತ್ತುಪಡಿಸಿಕೊಳ್ಳಿ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಿ”


"ನಿಮ್ಮ ಸ್ವಂತ ಗುರಿಗಳನ್ನು ಗೊತ್ತುಪಡಿಸಿಕೊಳ್ಳಿ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಿ
ದೀರ್ಘಕಾಲದವರೆಗೆ ಪ್ರೇರಣೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಒಂದು ಸವಾಲೇ ಸರಿ. ನಾವು ಮಾಡಬೇಕಾದಂತಹ ಕೆಲಸಗಳ ಪಟ್ಟಿ ಪುಟಗಟ್ಟಲೆ ಇದ್ದು, ನಮ್ಮ ಪ್ರಯಾಣದ ಒಂದು ಕೆಲಸ ನಪಾಸಾದರೆ ನಮ್ಮ ಮಾನಸಿಕ ಪರಿಸ್ಥಿತಿ ಹೇಗಿರಬಹುದು? ಪ್ರೇರಣೆ ಮಾಂತ್ರಿಕತೆಯಲ್ಲ. ಅಥವಾ ಅದು ಒಂದು ಕೊಳ್ಳಬಹುದಾದ ವಸ್ತುವೂ ಅಲ್ಲ. ಹಾಗು ಅದು ಇಂತಿಷ್ಟೇ ಎನ್ನುವಷ್ಟು ಪೊಟ್ಟಣದಲ್ಲೂ ಸಿಗುವುದಿಲ್ಲ. ಅಥವಾ ಅದು ವಿಟಮಿನ್ ಮಾತ್ರೆಯೂ ಅಲ್ಲ. ಒಂದಂತೂ ನಿಜ ಅದು ನಿನ್ನೊಳಗೆ ಇದೆ ಹಾಗು ನೀನೇ   ಅದನ್ನು ಬಡಿದೆಬ್ಬಿಸಬೇಕಿದೆ, ಯೂಟ್ಯೂಬ್‌ನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನೀವು ನೋಡುವ ಪ್ರತಿಯೊಬ್ಬ ಸ್ಪೂರ್ತಿದಾಯಕ ಲೇಖಕ, ಮಾತುಗಾರ ಮತ್ತು ಜೀವನ ತರಬೇತುದಾರರಿಗೆ ಹಂಚಿಕೊಳ್ಳಲು ಅವರದೇ ಆದ ಸಲಹೆಗಳಿರುತ್ತವೆ, ಆದರೆ ನನ್ನ ವೃತ್ತಿಜೀವನದ ದಶಕಗಳಲ್ಲಿ ಸೂಪರ್-ಯಶಸ್ವಿ, ಉನ್ನತ-ಸಾಧನೆ ಮಾಡುವ ಜನರನ್ನು ಗಮನಿಸಿಸುತ್ತಲೇ ಬಂದಿದ್ದೇನೆ, ಪ್ರೇರಣೆಯನ್ನು ಉಳಿಸಿಕೊಳ್ಳಲು ಕೆಲವು ಮೂಲಭೂತ ಅಂಶಗಳನ್ನು ನಾನು ಅರಿತುಕೊಂಡಿದ್ದೇನೆ.
ಹತ್ತು ಹಲವು ಕಾರಣಗಳಿರಬಹುದು ಗುರಿಯಿಂದ ದೂರ ಸರಿಯಲು, ಅದು ಸ್ವ-ಸಂಶಯ, ಗುರಿ ಸೇರಲಾರೆನೆಂಬ ಅನಂತ ಭಯ, ವಾಸ್ತವಿಕವಾಗಿ ಸಾಧಿಸಲಾಗದ ಗುರಿ, ಬಿಸಿಲ್ಕುದುರೆ ಎಂಬ ನಿಮ್ಮ ಗುರಿ, ಇವು ಕೆಲವು ಉದಾಹರಣೆಗಳಷ್ಟೇ. ಇಲ್ಲಿ ನಾವು ನೆನಪಿಟ್ಟುಕೊಳ್ಳುವುದು ಮತ್ತು ನೆನಪಿಸಿಕೊಳ್ಳುವುದು ಮುಖ್ಯವಾದುದೇನೆಂದರೆ, ನಾವು ನಮ್ಮ ಗುರಿಯನ್ನು ಬದಲಾಯಿಸಿಕೊಳ್ಳಬಹುದು, ಮುಂದುವರಿಸಬಹುದು ಇಲ್ಲವೇ ಮೂಲೆಗುಂಪುಮಾಡಬಹುದು, ಇಲ್ಲವೇ ಅದನ್ನು ಪರಿಷ್ಕರಿಸಬಹುದು. ಇದೆಲ್ಲವೂ ನಾವು ಬಯಸಿದರೆ ಮಾತ್ರ ಸಾಧ್ಯವಾಗುತ್ತದೆ. ಯಾವಾಗ ನಮ್ಮ ಮನಸ್ಸಿನಲ್ಲಿ ಸಂಶಯದ ವಾಸನೆ ಆರಂಭವಾಗುವುದೋ ಆಗ ನಮ್ಮಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಹಾಗೂ ನಮಗೆ ಮುಂದೆ ದಾರಿಯೇ ಇಲ್ಲವೆನ್ನಿಸಿಬಿಡುವುದು. ಆದಾಗ್ಯೂ, ಹೆಚ್ಚಾಗಿ, ನಾವು ನಮ್ಮ ಗುರಿಯಿಂದ ಹಿಂದೆ ಸರಿಯುತ್ತೇವೆ. ನಿಮ್ಮ ಗುರಿ ತಲುಪುವ ಜವಾಬ್ದಾರಿ ನಿಮ್ಮದೇ ಹಾಗೇ ಅದರ ಪರಿಣಾಮಗಳ ಜವಾಬ್ದಾರಿಯನ್ನೂ ನೀವೇ ಹೊರಬೇಕು. ಯಾವಾಗ ನಾವು ಹೋಗುತ್ತಿರುವ ದಾರಿ ಕಠಿಣವೆನಿಸುವುದೋ ಆಗ, ನಾವು ತಪ್ಪು ನಿರ್ಧಾರ ಮಾಡಿದೆವೆನಿಸದೆಯಿರದು. ನಾವು ನೆನಪಿಡಬೇಕು ಗುರಿ ಹಾಗೂ ಆಯ್ದುಕೊಂಡ ದಾರಿ ನಮ್ಮದೇ ನಿರ್ಧಾರದ ಫಲವೆಂದು.
ನಿಮ್ಮನ್ನು ನೀವು ಅನುಮಾನಿಸಿದಾಗಲೆಲ್ಲಾ, ನೀವು ಇಲ್ಲಿಯವರೆಗೆ ಸಾಧಿಸಿದ್ದನ್ನು ಹಿಂತಿರುಗಿ ನೋಡಿ. ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಗುರಿಯತ್ತ ಹೆಜ್ಜೆ ಹಾಕುತ್ತಿದ್ದರೆ, ಸಮಯದಲ್ಲಿ ನಿಮಗನಿಸಬಹುದು ನೀವು ಎಲ್ಲೋ ಕಳೆದುಹೋಗಿದ್ದೀರೆನಿಸಬಹುದು. ಏಕೆಂದರೆ ನೀವು ವಾಪಸ್ಸು ನಿಮ್ಮ ಆರಂಭಕ್ಕೂ ಹಿಂತಿರುಗಲಾರಿರಿ ಹಾಗೇ ನಿಮ್ಮ ಅಂತಿಮ ಗುರಿಯನ್ನು ತಲುಪಲಾಗದ ಸ್ಥಿತಿ. ಇಲ್ಲಿ, ಕಳೆದುಹೋದ ಭಾವನೆಯ ಮಧ್ಯೆ, ನೀವು ಈಗಾಗಲೇ ಸಾಧಿಸಿದ ಎಲ್ಲವನ್ನು ಪರಿಗಣಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮ. ದೀರ್ಘ ಪಯಣದಲ್ಲಿ ಇದು ಸಹಜ, ಸ್ವಲ್ಪ ತಾಳ್ಮೆ ತೆಗೆದುಕೊಳ್ಳಿ. ನೀವು ಸಾಧಿಸಿದ ಮಜಲುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಸಾಧನೆಗೆ ನೀವೇ ಬೆನ್ನು ತಟ್ಟಿಕೊಳ್ಳಿ. ನಿಮ್ಮನ್ನು ನೀವು ಅಭಿನಂದಿಸಿ ಮತ್ತು ನಿಮ್ಮ ಪ್ರಯಾಣದ ಮುಂದಿನ ಮಜಲುಗಳನ್ನು ತಲುಪಲು ಸಿದ್ಧರಾಗಿ. ನಿಮ್ಮ ಗುರಿಯತ್ತ ಸಾಗಲು ಅಡತಡೆಗಳಿಂದ ನಿರಾಶೆಗೊಂಡ ಸಮಯದಲ್ಲಿ ತಾಳ್ಮೆ ವಹಿಸಿ ಯೋಚಿಸಿ ನೋಡಿ, ನೀವು ಸಿದ್ಧಪಡಿಸಿದ ಕಾರ್ಯಸೂಚಿಯನ್ನು ಅವಲೋಕಿಸಿ, ಎಲ್ಲಿ ತಪ್ಪಾಗಿದೆ ತಿಳಿದುಕೊಳ್ಳಿ.  ಮುಂದೆ ಏನು ಮಾಡಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಯೋಜನೆಯಂತೆ ನಿಮ್ಮ ಕಾರ್ಯಸೂಚಿಯಲ್ಲಿ ಬದಲಾವಣೆಗಳನ್ನು ತನ್ನಿ. ಹೀಗೆ ನೀವು ಮಾಡಿದ್ದೇ ಆದಲ್ಲಿ ನಿಮ್ಮಲ್ಲಿ ತುಂಬಿದ್ದ ಹತಾಶೆಯ ಭಾವನೆ ಓಡಿಹೋಗಿ ಹೊಸ ಸ್ಫೂರ್ತಿ ತುಂಬಿ ಮುಂದಿನ ಛಲದ ಕದನಕ್ಕೆ ನೀವೇ ಸಿದ್ಧರಾಗುವಿರಿ. 
ನಾವು ಕೊಡಬೇಕಾದಂತಹ ನೆವಗಳನ್ನು ನಿಮಗೆ ಕಾಣುವಂತೆ ಹಾದಿಯಲ್ಲಿ ಇರಿಸಿ ಮತ್ತು ಸಮಯದ ಬಗ್ಗೆ ನಿಮ್ಮನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ನಮ್ಮ ಗುರಿಯಿಂದ ಹಿಂದೆ ಸರಿಯಬೇಕೆನಿದಾಗಲೆಲ್ಲಾ ಕಳ್ಳ ನೆವಗಳೊಮ್ಮೆ ನೆನಪಿಸಿಕೊಳ್ಳಿ.  ನಿಮ್ಮ ಗುರಿ ನಿಮ್ಮ ಆಲೋಚನೆಗಳ ಫಲವೆಂಬುದು ನಿಮಗೆ ತಿಳಿದಿರಲಿ. ದೀರ್ಘಾವಧಿಯ ಗುರಿಯನ್ನು ಅನುಸರಿಸಲು, ನಮಗೆ ಅರ್ಥವಾಗುವಂತಹ ಘನ ಕಾರಣಗಳು ನಮಗೆ ತಿಳಿದಿರಬೇಕು.  ಗುರಿಯು ಬಾಯಿಮಾತಿನಂತೆ ಹೇಳುವ ಹಾಗೆ ಕಲ್ಲುಬಂಡೆಯಂತೆ ನಿಖರವಾಗಿರುವುದಿಲ್ಲ.  ನಮ್ಮ ಗುರಿಯು ನಮಗೆ ಹೇಗೆ ಬೇಕೋ ಹಾಗೆ ಬಾಗಿಸುವಂತಿರಬೇಕು ಹಾಗು ಮುಕ್ತ ಮನಸ್ಸಿನಿಂದ ಕೂಡಿರಬೇಕು. ಕೆಲವು ಕಾರಣಗಳಿಂದಾಗಿ ನಿಮ್ಮ ಅಪೇಕ್ಷಿತ ಗುರಿಯತ್ತ ಸಾಗಲು ನಿಮ್ಮ ಆರಂಭಿಕ ಕಾರಣಗಳನ್ನು ನೀವು ಯಶಸ್ವಿಯಾಗಿ ನೆನಪಿಸಿಕೊಳ್ಳಲಾಗದಿದ್ದರೆ, ಮತ್ತು ಪ್ರಯಾಣವನ್ನು ಕೈಗೊಳ್ಳಲು ನಿಮ್ಮನ್ನು ಒತ್ತಾಯಿಸಿದ ಮಹತ್ತರ ಕಾರಣಗಳ ಬಗ್ಗೆ ಮತ್ತೆ ಬೆಳಕುಚೆಲ್ಲಬೇಕಾಗುತ್ತದೆ, ಸಮಯದಲ್ಲಿ ನಾವು ನಮ್ಮ ಹಾದಿಯಲ್ಲಿ ಎಲ್ಲಿದ್ದೇವೆ ಎನ್ನುವುದರ ಅರಿವು ನಮಗಾಗುತ್ತದೆ. ಎಲ್ಲಿಯವರೆಗೆ ನೀವು ನಿಮಗಾಗಿ ಮೋಸಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ, ನಿಮ್ಮ ಗುರಿಯನ್ನು ಮರುಹೊಂದಿಸಲು ಮತ್ತು ನಿಮ್ಮ ಗಮನವನ್ನು ಮರಳಿ ಪಡೆಯಲು ಯಾವುದೇ ಅವಮಾನವಿಲ್ಲ. ನಿಮಗೆ ಯಾವುದು ಉತ್ತಮ ಎಂದು ನೀವು ಮಾತ್ರ ನಿರ್ಧರಿಸಬಹುದು ಮತ್ತು ಅದು ಕಾಲಾನಂತರದಲ್ಲಿ ಬದಲಾಗಬಹುದು. ಪೂರ್ಣ-ಗಮನ ಮತ್ತು ಹುಮ್ಮಸ್ಸಿನಿಂದ ಗುರಿಗಳ ಬೆನ್ನಟ್ಟುವ ಅನುಮತಿ ನೀವೇ ಕೊಡಬೇಕು, ಅಥವಾ ಅವುಗಳನ್ನು ಬದಲಾಯಿಸುವುದು, ಅಥವಾ ಸ್ವಲ್ಪ ಸಮಯದವರೆಗೆ ಅವುಗಳನ್ನು ಮುಂದೂಡುವುದು, ಅಥವಾ ಸಮಯದಲ್ಲಿ ನಾವು ನಿರ್ಧರಿಸಿದ ಯಾವುದು ಸರಿಯೋ ಅದು; ಏಕೆಂದರೆ ನಾವು ಏನೋ ಅದು ನಮ್ಮ ಸ್ವಂತ ಆಯ್ಕೆಗಳ ಫಲಿತಾಂಶ.

ಸುರೇಂದ್ರ ಕುಮಾರ್ ಸಚ್‌ದೇವ
ಕನ್ನಡಕ್ಕೆ: ನಾಗೇಂದ್ರ ಕುಮಾರ್ ಕೆ.ಎಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ