ಬುಧವಾರ, ಜುಲೈ 15, 2020

ಯಾವಾಗಲೂ ಸಂತೋಷವಾಗಿರುವ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ


ಯಾವಾಗಲೂ ಸಂತೋಷವಾಗಿರುವ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ




ಲೋಕದಲ್ಲಿ ಸಿಹಿ ಅಥವಾ ಕಹಿ ಅನುಭವ ಸರ್ವೇಸಾಮಾನ್ಯ. ಅವು ಹೇಗೆ ಬರುವುದು ಹಾಗೇ ಸ್ವೀಕರಿಸುವುದೇ ಜಾಣನಾದವನ ಬುದ್ಧಿವಂತಿಕೆಯ ಲಕ್ಷಣಸಿಹಿ ಬಂದಾಗ ಮೆರೆಯುವುದು ಹಾಗೂ ಕಹಿ ಯಾದಾಗ ಕುಗ್ಗುವುದು ಮಾನಸಿಕ ಆರೋಗ್ಯದ ಮೇಲೆ ಅತೀವ ಪರಿಣಾಮವನ್ನು ಬೀರುತ್ತದೆ. ಕಹಿ ಭಾವನಾತ್ಮಕ ವೈಫಲ್ಯದ ಸಂಕೇತವಾಗಿದೆ. ಇದು ಒಳ್ಳೆಯದನ್ನು ಮಾಡುವ ನಮ್ಮ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ನಮ್ಮ ಕೆಲಸಗಳಿಗೆ ನಾವೇ ಸ್ವಂತ ಮಾನದಂಡಗಳನ್ನು(Standards) ಹಾಕಿಕೊಂಡರೆ ಏಳಿಗೆಗೆ ಸಹಕಾರಿಯಾಗುತ್ತದೆ. ನಮಗೆ ನಾವೇ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ನಮಗೆ ನಾವೇ ಸ್ಪರ್ಧಿ ಇಲ್ಲಿ. ನಮ್ಮ ಅವಗುಣಗಳ ವಿರುದ್ಧ ನಾವೇ ಸೆಣಸಬೇಕಾಗಿದೆ.

ಕೆಳಗಿನ ಸೂಚನೆಗಳನ್ನು ನಾವು ತಪ್ಪದೇ ಪಾಲಿಸಿದರೆ ನಮ್ಮ ಗೆಲುವು ನಿಶ್ಚಿತ:
   

  1. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮತ್ತು ಪ್ರತಿಯೊಂದು ಸನ್ನಿವೇಶದಲ್ಲೂಸಕಾರಾತ್ಮಕತೆಯನ್ನು ನೋಡೋಣ.
  2. ಯಾವಾಗಲೂ ಸಂತೋಷವಾಗಿರಲು ನಿರ್ಧರಿಸಿ, ನಿಮ್ಮ ಮನಸ್ಸಿನ ಸಂತೋಷಕ್ಕೆ ನೀವೇ ಕಾರಣಬೇರೆಯವರನ್ನು  ಹೊಣೆಗಾರರನ್ನಾಗಿಸಬೇಡಿ.
  3. ನಿಮ್ಮ ಸ್ವಂತ ಮಾನದಂಡಗಳನ್ನು(standards) ಸರಿಯಾಗಿ ಕಂಡುಕೊಳ್ಳೋಣ.
  4. ನಕಾರಾತ್ಮಕ ಟೀಕೆಗಳಿಗೆ ಹೆದರಬೇಡಿ ಹಾಗು ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ಕಲಿತುಕೊಳ್ಳೋಣ.
  5. ಪ್ರತಿಯೊಂದು ಸಣ್ಣ ವಿಷಯದಲ್ಲೂ ಆನಂದವನ್ನು ಕಂಡುಕೊಳ್ಳಲು ಕಲಿಯೋಣ.
  6. ಎಲ್ಲಾ ಸಮಯವೂ ಒಂದೇ ಆಗಿರುವುದಿಲ್ಲ ಎಂದು ನೆನಪಿಡಿ, ಏರಿಳಿತಗಳು ಜೀವನದ ಒಂದು ಭಾಗ.
  7. ಪ್ರತಿಯೊಂದು ಸನ್ನಿವೇಶವನ್ನೂ ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸೋಣ.
  8. ನಿಮ್ಮನ್ನು ರಚನಾತ್ಮಕವಾಗಿ ಯಾವಾಗಲೂ ತೊಡಗಿಸಿಕೊಳ್ಳಲು ಪ್ರಯತ್ನಿಸೋಣ.
  9. ನಿಮಗಿಂತ ಕಡಿಮೆ ಸ್ಥಿತಿವಂತರಿಗೆ ಸಹಾಯ ಮಾಡೋಣ.
  10. ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೆ ನೋಡಬೇಡಿ. ಬೇರೆಯವರ ಪರಿಸ್ಥಿಯನ್ನು ಹಾಗೂ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
  11. ನಿಮ್ಮನ್ನು ಮತ್ತು ಇತರರನ್ನು ಕ್ಷಮಿಸಿ. ತಪ್ಪಿದ್ದಲ್ಲಿ ಒಪ್ಪಿಕೊಳ್ಳೋಣ. ಮುಚ್ಚಿಟ್ಟುಕೊಂಡು ಕೊರಗುವುದು ಬೇಡ, ಅಥವಾ ದ್ವೇಷ ಸಾಧಿಸಬೇಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ