ಶುಕ್ರವಾರ, ಫೆಬ್ರವರಿ 20, 2026

ದೃಷ್ಟಿಕೋನದ ಮಹತ್ವ

ವಿಷಯ: ಜೀವನದ ಸಮಸ್ಯೆಗಳನ್ನು ವಿಶಾಲ ದೃಷ್ಟಿಯಿಂದ ನೋಡುವುದು

ಲೇಖಕಸ್ಕಾಟ್ ಎಚ್ಯಂಗ್

1.            ದೃಷ್ಟಿಕೋನ ಏಕೆ ಮುಖ್ಯ?

ನಾವು ಕೆಲವೊಮ್ಮೆ ಸಣ್ಣ ಸಮಸ್ಯೆಗಳಿಂದ ತುಂಬಾ ಕಂಗೆಡುತ್ತೇವೆ. ಆದರೆ, ನಾವು ನಮ್ಮ ಜೀವನದ ದೊಡ್ಡ ಚಿತ್ರವನ್ನು ನೋಡಿದಾಗ, ಸಮಸ್ಯೆಗಳು ಅತಿ ಸಣ್ಣದಾಗಿ ಕಾಣಿಸುತ್ತವೆ. ದೃಷ್ಟಿಕೋನ ವಿಸ್ತಾರವಾಗಿದರೆ, ನಾವು ಶಾಂತವಾಗಿ, ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳಬಹುದು.

2.            2.                 ದೃಷ್ಟಿಕೋನ ವಿಸ್ತರಿಸಲು ಸರಳ ವಿಧಾನ


1.      ಶಾಂತವಾಗಿ ಕುಳಿತುಕೊಳ್ಳಿಕಣ್ಣು ಮುಚ್ಚಿ, ಆಳವಾಗಿ ಉಸಿರೆಳೆದುಕೊಳ್ಳಿ, ಧ್ಯಾನಿಸಿ.

2.      ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಳ್ಳಿ – 6 ತಿಂಗಳು ನಂತರದ ನಿಮ್ಮ ಜೀವನವನ್ನು ಊಹಿಸಿ.

3.      ಇನ್ನಷ್ಟು ದೂರ ಹೋಗಿ – 5, 10, ಅಥವಾ 50 ವರ್ಷಗಳ ನಂತರದ ದೃಶ್ಯವನ್ನು ಕಲ್ಪಿಸಿಕೊಳ್ಳಿ.

4.      ನಿಮ್ಮನ್ನು ಕೇಳಿಕೊಳ್ಳಿ ಸಮಸ್ಯೆ ಅಷ್ಟು ಕಾಲದ ನಂತರವೂ ಮುಖ್ಯವಾಗಿರುತ್ತದೆಯೇ?



ತಂತ್ರವು ನಿಮ್ಮ ದೃಷ್ಟಿಕೋನವನ್ನು ಇಷ್ಟು ವಿಸ್ತಾರಗೊಳಿಸುತ್ತದೆ, ಸಣ್ಣ ಸಮಸ್ಯೆಗಳು ಜೀವನದ ದೀರ್ಘ ಪಥದಲ್ಲಿ ಕೇವಲ ಒಂದು ಬಿಂದುವಿನಂತೆ  ಕಾಣುತ್ತವೆ.”

3.              ಜೀವನದಲ್ಲಿ ಅನ್ಯಾಯವಾಗಿದೆ ಅನ್ನಿಸಿದಾಗ

·         ಜೀವನ ಯಾವಾಗಲೂ ನ್ಯಾಯಸಮ್ಮತವಾಗಿರಲ್ಲ.

·         ದೂರು ಹೇಳುವುದರಿಂದ ಏನೂ ಬದಲಾಗುವುದಿಲ್ಲ.

·         ಬದಲಾಗಿ, ನೀವು ಎದುರಿಸುತ್ತಿರುವ ಸವಾಲುಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಮೇಲೆ ಗಮನ ಹರಿಸಿ.

·         ನಿಮ್ಮ ಶಕ್ತಿಯನ್ನು ಬೆಳವಣಿಗೆಯ ಕಡೆಗೆ ಬಳಸಿ, ಋಣಾತ್ಮಕ (negative) ಚಿಂತನೆಗಳ ದೂರ ತಳ್ಳಿ.

4.              ನಿಮ್ಮ ಜೀವನದ ಮಿತಿ / ಗಡಿಗಳನ್ನು ಮೀರಿ

ಸಮಸ್ಯೆ ಇನ್ನೂ ದೊಡ್ಡದಾಗಿ ಕಾಣಿಸುತ್ತಿದ್ದರೆ:

·         ನಿಮ್ಮ ಸಮುದಾಯ, ದೇಶ ಅಥವಾ ಜಗತ್ತಿನ ಬಗ್ಗೆ ಯೋಚಿಸಿ.

·         ಕೇಳಿ: ಸಮಸ್ಯೆ ಜಗತ್ತಿನ ದೃಷ್ಟಿಯಿಂದ ಎಷ್ಟು ದೊಡ್ಡದು?

5.              ಕೊನೆಯ ಮಾತು

ಪ್ರತಿಯೊಬ್ಬರಿಗೂ ಸಮಸ್ಯೆಗಳಿವೆ. ಆದರೆ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ದೃಷ್ಟಿಕೋನ ಪಡೆಯುವುದು ನಮ್ಮ ಸಮಯವನ್ನು ಜಾಣ್ಮೆಯಿಂದ ಬಳಸಲು ಮತ್ತು ಅರ್ಥಪೂರ್ಣವಾಗಿ ಬದುಕಲು ಸಹಾಯ ಮಾಡುತ್ತದೆ.

 

ಮೂಲ: Scott H. Young

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ