ಗುರಿಗಳು ನಮಗೆ ಏಕಾಗ್ರತೆಯನ್ನು ನೀಡುತ್ತವೆ. ಆದರೆ ಅತಿಯಾದ ಏಕಾಗ್ರತೆ ನಮ್ಯತೆ / ಬಾಗುವಿಕೆ (Flexibility) ಯನ್ನು ಕಡಿಮೆ ಮಾಡುತ್ತದೆ. ಯಶಸ್ಸು ಸಾಧಿಸಲು ಎರಡರ ನಡುವೆ ಸಮತೋಲನ ಅಗತ್ಯ.
1. ಜಾಗೃತಿಯ ಮಹತ್ವ
·
ಗುರಿಗಳು
ದಿಕ್ಕು ನೀಡುತ್ತವೆ, ಆದರೆ ಜೀವನದ ದೊಡ್ಡ
ಚಿತ್ರವನ್ನು ಮರೆಮಾಡಬಹುದು.
·
ಪರಿಹಾರ:
o ದೈನಂದಿನ ಪರಿಶೀಲನೆ – ಚಿಕ್ಕ ಚಿಂತನೆಗಳು, ಅಲಕ್ಷ್ಯವನ್ನು ಕಡಿಮೆ ಮಾಡುತ್ತವೆ.
o ವಾರದ ಪರಿಶೀಲನೆ – ದೀರ್ಘ ಚಿಂತನೆ, ನಾವು ಸರಿಯಾದ ದಾರಿಯಲ್ಲಿ
ಸಾಗುತ್ತಿದ್ದೇವೆಯೇ ಎಂದು ನೋಡಲು.
·
ಇದು
ಕಾಡಿನಲ್ಲಿ ಮರ ಏರಿದಂತೆ: ಶ್ರಮ
ಬೇಕು, ಆದರೆ ದಾರಿ ಸ್ಪಷ್ಟವಾಗುತ್ತದೆ.
2. ಬೆಳವಣಿಗೆಯ ನೋವನ್ನು
ಒಪ್ಪಿಕೊಳ್ಳುವುದು
·
ನಾವು
ಬೆಳೆಯುತ್ತಿದ್ದಂತೆ ಹಳೆಯ ಗುರಿಗಳು ಹೊಸ
ದೃಷ್ಟಿಕೋನಕ್ಕೆ ಹೊಂದಿಕೊಳ್ಳುವುದಿಲ್ಲ.
·
ಹಳೆಯ
ಗುರಿಗಳನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದು ನಿರಾಶೆ ಮತ್ತು ಉತ್ಸಾಹದ ಕೊರತೆಯನ್ನು ಉಂಟುಮಾಡುತ್ತದೆ.
·
ಪಾಠ:
ಗುರಿಗಳು ನಮ್ಮನ್ನು ವಿಸ್ತರಿಸಬೇಕು, ಬಂಧಿಸಬಾರದು.
·
ಅಗತ್ಯವಿಲ್ಲದ
ಗುರಿಗಳನ್ನು ಬಿಟ್ಟು ಹೊಸ ಗುರಿಗಳನ್ನು ಹೊಂದುವುದೇ
ಸರಿ.
·
ಗುರಿಗಳು
ನಿಜವಾಗಿಯೂ ಮುಖ್ಯವಾದ ವಿಷಯಗಳನ್ನು ಮಾತ್ರ ನಿಯಂತ್ರಿಸಬೇಕು.
·
ಹೆಚ್ಚು
ನಿರ್ಬಂಧಗಳು ನಮ್ಯತೆ / ಬಾಗುವಿಕೆ ಯನ್ನು ಕಡಿಮೆ ಮಾಡುತ್ತವೆ.
·
ಯಾವಾಗಲೂ
ಕೇಳಿಕೊಳ್ಳಬೇಕು: ನಾನು ಇದನ್ನು ಏಕೆ ಮಾಡುತ್ತಿದ್ದೇನೆ?
·
ಏಕಾಗ್ರತೆ
ಶಕ್ತಿಯುತ, ಆದರೆ ಅಪ್ರಮುಖ ಕಾರ್ಯಗಳಲ್ಲಿ
ವ್ಯರ್ಥ ಮಾಡಬಾರದು.
·
“ಪರಿಪೂರ್ಣ”
ಯೋಜನೆಗಾಗಿ ಕಾಯುವುದು ಪ್ರಗತಿಯನ್ನು ತಡೆಯುತ್ತದೆ.
·
ಉತ್ತಮ
ವಿಧಾನ: ಈಗಲೇ ಕಾರ್ಯಾರಂಭಿಸಿ, ನಂತರ
ತಿದ್ದುಪಡಿ ಮಾಡಿ.
·
ತಪ್ಪುಗಳು
ಕಲಿಕೆಯ ಭಾಗ – ಅವನ್ನು ತಕ್ಷಣ ಸರಿಪಡಿಸಿ ಮುಂದುವರಿಯಿರಿ.
ಯಶಸ್ಸು
ಸಾಧಿಸಲು ವಿದ್ಯಾರ್ಥಿಗಳು:
·
ತಮ್ಮ
ದಿಕ್ಕಿನ ಬಗ್ಗೆ ಜಾಗೃತರಾಗಿರಬೇಕು.
·
ಬೆಳವಣಿಗೆ
ಮತ್ತು ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು.
·
ಗುರಿಗಳನ್ನು
ಸರಳ ಮತ್ತು ಮುಖ್ಯವಾಗಿರಿಸಬೇಕು.
· ತಕ್ಷಣ ಕಾರ್ಯ ಪ್ರವೃತ್ತರಾಗಬೇಕು, ಪರಿಪೂರ್ಣತೆಯ ನಿರೀಕ್ಷೆಯಿಲ್ಲದೆ.
ಏಕಾಗ್ರತೆ
(ಸ್ಪಷ್ಟ ಗುರಿಗಳು) ಮತ್ತು ನಮ್ಯತೆ / ಬಾಗುವಿಕೆ (ಜಾಗೃತಿ ಮತ್ತು ಹೊಂದಿಕೊಳ್ಳುವಿಕೆ) – ಇವೆರಡರ ಸಮತೋಲನವೇ ಅರ್ಥಪೂರ್ಣ ಪ್ರಗತಿಯ ಗುಟ್ಟು.
ಮೂಲ:
Scott H. Young

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ