ಗುರುವಾರ, ಜುಲೈ 3, 2025

ನೈತಿಕ ಮೇಲುಗೈ

 ವಾನರ ಸೈನ್ಯದೊಂದಿಗೆ ರಾಮನು ಸಾಗರವನ್ನು ದಾಟಿರುವುದನ್ನು  ರಾವಣ ಕೇಳುತ್ತಿದ್ದಂತೇ , ಅವನು ತನ್ನ ಮಂತ್ರಿಗಳಾದ ಶುಕ ಮತ್ತು ಶರಣರೊಡನೆ ಮಾತನಾಡಿದ- ಇಡೀ ವಾನರ ಸೈನ್ಯವು ದುರ್ಗಮವಾದ ಸಾಗರವನ್ನು ದಾಟಿತು. ಸೇತುವೆಯ ನಿರ್ಮಾಣವು ಅಭೂತಪೂರ್ವವಾಗಿದೆ ಮತ್ತು ಅದನ್ನು ರಾಮನು ಕಾರ್ಯಗತಗೊಳಿಸಿದನು. ಯಾವುದೇ ಪರಿಸ್ಥಿತಿಯಲ್ಲಿ ಸಾಗರಕ್ಕೆ ಸೇತುವೆಯ ನಿರ್ಮಾಣ ಸಾಧ್ಯತೆ ಎಂಬುದು ನನ್ನ ನಂಬಿಕೆಗೆ ಮೀರಿದೆ. ವಾನರ ಸೈನ್ಯವು ಎಣಿಕೆಗೆ ಯೋಗ್ಯವಾಗಿದೆ ಎಂದರ್ಥ.

ಮಾರುವೇಷ ಧರಿಸಿ, ವಾನರ ಸೈನ್ಯವನ್ನು ಪ್ರವೇಶಿಸಿ ಮತ್ತು ಸುಗ್ರೀವನ ಮಂತ್ರಿಗಳು  ಮತ್ತು ಅವರ ಪ್ರಮುಖ ನಾಯಕರು ಮತ್ತು ಮುಂಭಾಗದಲ್ಲಿ ನಿಂತಿರುವ ಮತ್ತು ಧೀರರಾದ ಅವರ ನೈಜ ಶಕ್ತಿಯನ್ನು ಪತ್ತೆ ಮಾಡಿ. ಬೃಹತ್ ಸಾಗರದಲ್ಲಿ ಸೇತುವೆಯನ್ನು ಹೇಗೆ ನಿರ್ಮಿಸಲಾಯಿತು? ಅವರು ಹೇಗೆ ಶಿಬಿರದಲ್ಲಿದ್ದಾರೆ? ಅವರು ಎಷ್ಟು ಧೃಡರಾಗಿದ್ದಾರೆ ? ರಾಮ ಮತ್ತು ಲಕ್ಷ್ಮಣರ ಶಕ್ತಿ ಮತ್ತು ಸಾಮರ್ಥ್ಯಗಳೇನು?, ವಾನರ ಸೈನ್ಯದ ಮುಖ್ಯಸ್ಥ ಯಾರು? ಎಲ್ಲಾ ವಿವರಗಳನ್ನು ತನಿಖೆ ಮಾಡಿ ಮತ್ತು ತ್ವರಿತವಾಗಿ ಹಿಂತಿರುಗಿ ನನಗೆ ವರದಿಮಾಡಿ.

ಸೂಚನೆಯಂತೆ, ಶುಕ ಮತ್ತು ಶರಣ ಇಬ್ಬರೂ ವಾನರ ವೇಷವನ್ನು ತೊಟ್ಟುಕೊಂಡರು  ಮತ್ತು ವಿರೋಧಿ ಸೈನ್ಯದ ತಂಗು ಪ್ರದೇಶಕ್ಕೆ ಹೋದರು. ಅವರು ವಾನರರ ಅನಂತ  ಸೈನ್ಯವನ್ನು ನೋಡಿದಾಗ, ಅವರು ರೋಮಾಂಚನಗೊಂಡರು.

ಸೇನೆಯು ಪರ್ವತಗಳ ತುದಿಯಲ್ಲಿ, ಜಲಪಾತಗಳ ಸುತ್ತಲೂ, ಗುಹೆಗಳಲ್ಲಿ, ಸಮುದ್ರ ತೀರದಲ್ಲಿ, ಕಾಡುಗಳಲ್ಲಿ ಮತ್ತು ಉದ್ಯಾನಗಳಲ್ಲಿ ಇಳಿದುಕೊಂಡಿದ್ದರು. ಅವರು ಸಾಗರವನ್ನು ದಾಟುವ ಪ್ರಕ್ರಿಯೆಯಲ್ಲಿದ್ದರು ಅಥವಾ ಅದನ್ನು ಸಂಪೂರ್ಣವಾಗಿ ದಾಟಲು ಉದ್ದೇಶಿಸಿದ್ದರು. ಅವರು ಭಯಂಕರವಾದ ಶಬ್ದವನ್ನು ಮಾಡುತ್ತಿದ್ದರು ಮತ್ತು ದೈಹಿಕವಾಗಿ ಬಹಳ  ಪ್ರಬಲರಾಗಿದ್ದರು.

ವಿಭೀಷಣನು ರಾವಣನ ಮಂತ್ರಿಗಳನ್ನು ಮಾರುವೇಷದಲ್ಲಿರುವುದನ್ನು  ಗುರುತಿಸಿದನು ಮತ್ತು ಅವರನ್ನು ಹಿಡಿದನು. ಅವನು ಅವರನ್ನು ರಾಮನ ಬಳಿಗೆ ಕರೆದೊಯ್ದು ಹೇಳಿದನು - ಶತ್ರು ಕೋಟೆಗಳನ್ನು ಗೆದ್ದವನೇ! ಇಬ್ಬರು ವಾನರರು ಮಾರುವೇಷದಲ್ಲಿರುವವರು  ರಾವಣನ ಮಂತ್ರಿಗಳಾದ ಶುಕ ಮತ್ತು ಶರಣರು ಮತ್ತು ಲಂಕಾದಿಂದ ಗೂಢಚಾರರಾಗಿ ಇಲ್ಲಿಗೆ ಬಂದಿದ್ದಾರೆ.

ಇಬ್ಬರು  ರಾಕ್ಷಸರು ತಮ್ಮ ಬದುಕುಳಿಯುವ ಭರವಸೆಯಿಲ್ಲದೆ ಭಯದಿಂದ ನಡುಗಿದರು. ಅವರು ಅಂಗೈಗಳನ್ನು ಜೋಡಿಸಿ ಹೇಳಿದರು- ರಾಮಾ! ನಿನ್ನ ಮತ್ತು ನಿನ್ನ ಸೇನೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ರಾಕ್ಷಸ ರಾಜನಿಂದ ನಾವು ಕಳುಹಿಸಲ್ಪಟ್ಟಿದ್ದೇವೆ.

ರಾಮನು ಸಕಲ ಜೀವಿಗಳ ಕಲ್ಯಾಣದಲ್ಲಿ ಆಸಕ್ತನಾದವನು  ಮುಗುಳ್ನಗುತ್ತಾ ಹೇಳಿದನು-ನೀವು ಇಡೀ ಸೈನ್ಯವನ್ನು ಚೆನ್ನಾಗಿ ಗಮನಿಸಿದ್ದೀರಾ? ನಿಮಗೆ ವಹಿಸಿಕೊಟ್ಟ ಕೆಲಸವನ್ನು ನೀವು ಪೂರ್ಣಗೊಳಿಸಿದ್ದೀರಾ ? ಹಾಗಿದ್ದಲ್ಲಿ, ನಿಮ್ಮ ಇಚ್ಛೆಯ ಪ್ರಕಾರ ನೀವು ಲಂಕೆಗೆ ಈಗಲೇ ಹಿಂತಿರುಗಬಹುದು. ನೀವು ಏನನ್ನಾದರೂ ಮರೆತ್ತಿದ್ದಾರೆ ಅಥವಾ ನೋಡದಿದ್ದರೂ ಸಹ ನೀವು ಅದನ್ನು ಈಗ ನೋಡಬಹುದು. ಇಲ್ಲದಿದ್ದರೆ, ವಿಭೀಷಣನು ಅದನ್ನು ನಿಮಗೆ ಸಂಪೂರ್ಣವಾಗಿ ತೋರಿಸುತ್ತಾನೆ. ನೀವು, ಸಿಕ್ಕಿಬಿದ್ದ ನಂತರ, ನಿಮ್ಮ ಜೀವದ ಬಗ್ಗೆ ಭಯಪಡುವ ಅಗತ್ಯವಿಲ್ಲ. ವಶಪಡಿಸಿಕೊಂಡ ಸಂದೇಶವಾಹಕರು ಯಾವುದೇ ಆಯುಧಗಳನ್ನು ಹೊಂದಿಲ್ಲದಿರುವುದರಿಂದ , ಅವರು ನಿಜವಾಗಿಯೂ ವಧೆಗೆ ಅರ್ಹರಲ್ಲ. ಅವರನ್ನು ಮುಕ್ತಗೊಳಿಸಿ! ಅವರ ಮೇಲೆ ಯಾರೂ ದಾಳಿ ಮಾಡಬಾರದು.

ರಾಮನು ಮುಂದುವರಿಸಿದನು- ನೀವು  ರಾವಣನ ಬಳಿಗೆ ಹಿಂತಿರುಗಿದಾಗ, ಸೀತೆಯನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಅವನು ಯಾವ ಬಲವನ್ನು ಅವಲಂಬಿಸಿದ್ದನೆಂದು ಅವನಿಗೆ ಜ್ಞಾಪಿಸಿ , ಅವನು ತನ್ನ ಸೈನ್ಯ ಮತ್ತು ಮಿತ್ರರ ಶಕ್ತಿಯೊಂದಿಗೆ ಶಕ್ತಿಯನ್ನು ಪೂರ್ಣವಾಗಿ ಪ್ರದರ್ಶಿಸಲಿ.

ನಾಳೆಯ  ದಿನ ವಿರಾಮ, ನನ್ನ ಬಾಣಗಳು ಲಂಕಾದ ಕೋಟೆಯನ್ನು ಕೆಡವುದನ್ನು ಅವನು ನೋಡುತ್ತಾನೆ.

ದುರ್ಬಲರನ್ನು ಹೊಡೆಯುವುದು ಹೇಡಿಗಳ ಕೃತ್ಯ. ಹೋರಾಟದಲ್ಲಿಯೂ ಸಹ, ನಿಮ್ಮ ಕ್ರಿಯೆಗಳ ಸಮಗ್ರತೆಯು ನಿಮ್ಮಲ್ಲಿರುವ ಶಕ್ತಿಯನ್ನು ವ್ಯಾಖ್ಯಾನಿಸುತ್ತದೆ. ಹೊಟ್ಟೆಯ ಕೆಳಗೆ  ಹೊಡೆಯುವ ಹತಾಶ ಕ್ರಿಯೆಗಳು ಅಥವಾ ಯಾವುದೇ ವೆಚ್ಚದಲ್ಲಿ ತ್ವರಿತ ಲಾಭಗಳು, ನಿಮ್ಮ ಸವಾಲಿನ ಒಟ್ಟಾರೆ ಉದ್ದೇಶಕ್ಕೆ ಹಾನಿಕಾರಕವಾಗಿರುತ್ತದೆ.

 

ನೈತಿಕ ಮೇಲುಗೈ ಪಡೆಯುವುದು ತಂಡದ ನೈತಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಗುರಿಯ ಕಡೆಗೆ  ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ನಂತರ ಅದು ಪ್ರತಿಯೊಬ್ಬರ ಹೋರಾಟವಾಗುತ್ತದೆ ಮತ್ತು ಅವರ ಅತ್ಯುತ್ತಮ ಸಾಮರ್ಥ್ಯಗಳಿಂದ  ಕೊಡುಗೆ ನೀಡುವ ಮೂಲಕ ಗುರಿ ತಲುಪುವುದು ವ್ಯಕ್ತಿಗತವಾಗಿರದೆ ಅದು ಒಟ್ಟಾರೆ ತಂಡದ್ದಾಗಿರುತ್ತದೆ.

 #ಜೀವನದ ಆಟ

ಮೂಲ ಆಂಗ್ಲಭಾಷೆ: ಸ್ವಪ್ನಿಲ್ ಗುಪ್ತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ