ಶನಿವಾರ, ಜುಲೈ 12, 2025

ಯಶಸ್ಸನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುವುದು ಹೇಗೆ?

 ಪ್ರೀತಿಯ ಮಿತ್ರ,

ನಾವು ಯಶಸ್ಸಿನ ಮಂತ್ರವನ್ನು ಬಟ್ಟಿ ಇಳಿಸಿದರೆ, ಅದು ಅಂತಿಮವಾಗಿಕೆಲಸಎಂಬ  ಪ್ರಮುಖ ಪದಕ್ಕೆ ಇಳಿಯುತ್ತದೆ. ಮಂತ್ರಕ್ಕೆ ನಾವು ಎರಡು ವಿಭಿನ್ನ ಪೂರ್ವಪ್ರತ್ಯಯಗಳನ್ನು ಸೇರಿಸಬಹುದು ಅವುಗಳೆಂದರೆ  - ’ಹಾರ್ಡ್-ಕಠಿಣಮತ್ತುಸ್ಮಾರ್ಟ-ಜಾಣ ಅಥವಾ ಚತುರ’. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಎಂದರೆ ಏನು ಎಂದು ಅರ್ಥ ಮಾಡಿಕೊಳ್ಳೋಣ. ಸಾಧಾರಣ ವಿದ್ಯಾರ್ಥಿಗಳು ಸಹ ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಇದನ್ನು ಕಠಿಣ ಪರಿಶ್ರಮ ಎಂದು ಪರಿಗಣಿಸಲಾಗುವುದಿಲ್ಲ. ಕಠಿಣ ಎಂದರೆ ಪ್ರತಿದಿನ ಕನಿಷ್ಠ ಎಂಟರಿಂದ ಹತ್ತು ಗಂಟೆಗಳ ಅಧ್ಯಯನ, ವಾರದಲ್ಲಿ ಏಳು ದಿನಗಳು ಮತ್ತು ವರ್ಷದ ಪ್ರತಿದಿನವೂ ಅಭ್ಯಾಸ ಮಾಡುವುದು. ನಿಮಗಾಗಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಕಠಿಣ ಅಧ್ಯಯನ ಮಾಡುವುದು ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಮೂಲ ಉದ್ದೇಶವಾಗಿದೆ. ಅದೇ ಸಮಯದಲ್ಲಿ, ನೀವು ರಾಷ್ಟ್ರದ ಯುವಕರಾಗಿರುವುದರಿಂದ , ನೀವು ಆರೋಗ್ಯ, ಫಿಟ್‌ನೆಸ್, ಕ್ರೀಡೆ, ಪೌಷ್ಠಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದು, ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯುವುದು ಮತ್ತು ನಿಮ್ಮ ಹವ್ಯಾಸಗಳು, ಆಸಕ್ತಿಗಳು ಮತ್ತು ಪಠ್ಯೇತರ ಪಠ್ಯಕ್ರಮದತ್ತ ಗಮನಹರಿಸುವುದು ಅಷ್ಟೇ ಮುಖ್ಯ. ರಾಷ್ಟ್ರೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸುವ ಜೊತೆಗೆ ಸುಸಂಗತವಾದ ವ್ಯಕ್ತಿತ್ವವನ್ನು ಬೆಳೆಸುವ ಚಟುವಟಿಕೆಗಳು ನಿಮ್ಮದಾಗಬೇಕು. 'ವೈಯಕ್ತಿಕ ಸಂದರ್ಶನ'ಗಳಿಗೆ  ಮತ್ತೊಂದು ಹೆಸರೇ ' ವ್ಯಕ್ತಿತ್ವ ಪರೀಕ್ಷೆ 'ಎಂದು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಿಮ್ಮ ವ್ಯಕ್ತಿತ್ವವು ನಿಮಗೆ ಸಹಾಯ ಮಾಡುತ್ತದೆ. ನೀವು ಉನ್ನತ ಸಂಸ್ಥೆಗಳಲ್ಲಿ ಆಯ್ಕೆಯಾಗಲು ಅಥವಾ ವಿವಿಧ ಖಾಸಗಿ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಆಯ್ಕೆಯಾಗಲು ಬಯಸಿದಾಗ ವೈಯಕ್ತಿಕ ಸಂದರ್ಶನಗಳು ಮತ್ತು ಗುಂಪು ಚರ್ಚೆಗಳು ಮುಖ್ಯ.

ಸ್ಮಾರ್ಟ್-ಜಾಣ ಅಥವಾ ಚತುರ  ಕೆಲಸ, ಮತ್ತೊಂದೆಡೆ, ಏನು ಅಧ್ಯಯನ ಮಾಡಬೇಕೆಂದು ತಿಳಿದಿರುವುದು. ಗೊತ್ತು ಗುರಿಯಿಲ್ಲದ ಅಧ್ಯಯನದಲ್ಲಿ ನೀವು ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಅಭ್ಯಾಸಮಾಡಿದರೆ , ಅದರಿಂದ ಸಮಯ ವ್ಯರ್ಥ. ಅಂತಹ ಕಾರ್ಯತಂತ್ರದ ಕೊರತೆಯಿಂದ ನಿಮಗೆ ಸಾಧಾರಣ ಮಟ್ಟದ ಯಶಸ್ಸನ್ನು ಮಾತ್ರ ನೀಡುತ್ತದೆ. ಸ್ಪರ್ಧೆಯಲ್ಲಿ ಉಳಿದವರಿಗಿಂತ ನೀವು ಬೇರೆಯವರಾಗಲು ಬಯಸಿದರೆ, ನೀವುಸ್ಮಾರ್ಟ್- ಜಾಣ ಅಥವಾ ಚತುರ’ ರಾಗಿ ಕೆಲಸ ಮಾಡಬೇಕಾಗುತ್ತದೆ.

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸುವ ಮೂಲಕ ನೀವು ಪ್ರಾರಂಭಿಸಬೇಕು. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಲು ಮತ್ತು ಅವುಗಳನ್ನು ಪರಿಹರಿಸಲು ನೀವು ಸಮಯವನ್ನು ಕಳೆಯುವಾಗ, ಕಳೆದ ಕೆಲವು ವರ್ಷಗಳಿಂದ ಇದು 10 ಮತ್ತು 12 ನೇ ಸ್ಟ್ಯಾಂಡರ್ಡ್ ಬೋರ್ಡ್ ಪರೀಕ್ಷೆಗಳೇ ಅಥವಾ ನಾಗರಿಕ ಸೇವೆಗಳ ಪರೀಕ್ಷೆಯ ಮಾದರಿಗಳೇ ಎಂದು ಇತ್ತೀಚಿನ ಪ್ರವೃತ್ತಿಗಳು ಹೇಗೆ ಹೊರಹೊಮ್ಮುತ್ತಿವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಹಿಂದಿನ ಪ್ರವೃತ್ತಿಗಳ ವಿಶ್ಲೇಷಣೆಯು ನಿಮ್ಮ ಮೆದುಳಿಗೆ ಕೈಯಲ್ಲಿರುವ ಕಾರ್ಯದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದು ಒಲಿಂಪಿಕ್ ಶೂಟರ್ ಅಂತಾರಾಷ್ಟ್ರೀಯ ಕ್ರೀಡಾಕೂಟವೊಂದರಲ್ಲಿ ತನ್ನ ಪಿಸ್ತೂಲ್ ಅನ್ನು ಶೂಟ್ ಮಾಡುವಾಗ ಗೂಳಿಯ (ಬುಲ್ಸ್) ಕಣ್ಣಿಗೆ ನೇರವಾಗಿ ಗುರಿಯಿಟ್ಟಂತೆ. ಇದು ಸ್ಮಾರ್ಟ್- ಜಾಣ ಅಥವಾ ಚತುರ ಕೆಲಸದ ನಿರ್ಣಾಯಕ ಅಂಶವಾಗಿದೆ. ನಿಮ್ಮ ಪರೀಕ್ಷೆಯ ಸಿದ್ಧತೆಯನ್ನು ಯಶಸ್ಸಿನ ಅವಕಾಶವನ್ನು ಹೆಚ್ಚಿಸುವ ರೀತಿಯಲ್ಲಿ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಸ್ಮಾರ್ಟ್- ಜಾಣ ಅಥವಾ ಚತುರ ಕೆಲಸ ಮಾಡುವ ಮುಂದಿನ ಹಂತವೆಂದರೆ ಅಣಕು ಪರೀಕ್ಷೆಗಳನ್ನು ಪ್ರಯತ್ನಿಸುವುದು. ಸಿವಿಲ್ ಸರ್ವೀಸಸ್ ಪರೀಕ್ಷೆಗಾಗಿ ನೀವು CSR ಲ್ಲಿ ಅಂತಹ ಅಣಕು ಪರೀಕ್ಷೆಗಳನ್ನು ಕಾಣಬಹುದು. ಪರೀಕ್ಷೆಗಳನ್ನು ಕ್ಷೇತ್ರದ ಪರಿಣತರಾದ ಶಿಕ್ಷಣ ಕ್ಷೇತ್ರದ ವೃತ್ತಿಪರರು ತಯಾರಿಸುತ್ತಾರೆ. ಅವರು ಹಿಂದಿನ ಪ್ರವೃತ್ತಿಗಳು ಮತ್ತು ಫ್ರೇಮ್ ಅಣಕು ಪತ್ರಿಕೆಗಳನ್ನು ವಿಶ್ಲೇಷಿಸುತ್ತಾರೆ, ಅದು ನಿಜವಾಗಿ ಕೇಳಲಾಗುವ ಪ್ರಶ್ನೆಗಳು ಮತ್ತು ನೀವು ತಯಾರಿ ನಡೆಸುತ್ತಿರುವ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳ ಸಂಯೋಜನೆಯಾಗಿದೆ.

ಎಂಬಿಎ (MBA) ಪ್ರವೇಶ ಪರೀಕ್ಷೆಗಳು, ನಾಗರಿಕ ಸೇವೆಗಳ ಪರೀಕ್ಷೆ(UPSC) ಅಥವಾ ರಕ್ಷಣಾ ಸೇವೆಗಳ (Defence Services) ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀವು ಪ್ರಯತ್ನಿಸುವಾಗ  ದಯವಿಟ್ಟು ನಿಮ್ಮ ಪ್ರದೇಶದ ತಜ್ಞರ ಮಾರ್ಗದರ್ಶನ ಪಡೆಯಲು ಪ್ರಯತ್ನಿಸಿ ಹಾಗೂ ಅವರಿಂದ ತಂತ್ರಗಳನ್ನು ತಿಳಿದುಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರಿಣತಿ ಹೊಂದಿರುವ ದೇಶದ ಪ್ರತಿ ಭಾಗದಲ್ಲೂ ಹೆಸರಾಂತ ತಜ್ಞರಿದ್ದಾರೆ. ಅವರನ್ನು ಸಂಪರ್ಕಿಸಿ  ಮತ್ತು ಅವರಿಂದ ಮಾರ್ಗದರ್ಶನ ಪಡೆಯುವುದು ಒಂದು ಉತ್ತಮ ತಂತ್ರವಾಗಿದೆ. ಹಂತವು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಮತ್ತೆ ಹೆಚ್ಚಿಸುತ್ತದೆ.

ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿರುವವರನ್ನು ಭೇಟಿ ಮಾಡುವುದು ಸ್ಮಾರ್ಟ್- ಜಾಣ ಅಥವಾ ಚತುರ ಕೆಲಸದ ಒಂದು ಭಾಗವಾಗಿದೆ. ಸಿಎಸ್ಆರ್(CSR) ನಂತಹ ನಿಯತಕಾಲಿಕೆಗಳ ಪುಟಗಳಲ್ಲಿ ನೀವು ಟಾಪರ್ಗಳ ಮಾತುಗಳನ್ನು ಕೇಳಿಸಿಕೊಳ್ಳಬಹುದು. ನೀವು ಸಾಧಿಸಬೇಕೆನ್ನುವ ಗುರಿಯ ಯಶಸ್ಸನ್ನು ಟಾಪರ್ಗಳು ಈಗಾಗಲೇ ಸಾಧಿಸಿದ್ದಾರಾದ್ದರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಅವರು ಬಳಸಿದ ತಂತ್ರ ಮತ್ತು ಅವರು ಉಪಯೋಗಿಸಿದ ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ನಿಯತಕಾಲಿಕೆಗಳು ಮತ್ತು ತರಬೇತಿ ಅವಕಾಶಗಳ ಬಗ್ಗೆ ತಿಳಿದುಕೊಳ್ಳುವುದು ಅಮೂಲ್ಯ. ಮೊದಲ ಪ್ರಯತ್ನದಲ್ಲಿ ಅನೇಕ ಟಾಪರ್ಗಳು ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದಿಲ್ಲ.  ಅವರ ತಪ್ಪುಗಳಿಂದ ಕಲಿಯುವುದು ಅಷ್ಟೇ ಮುಖ್ಯ, ಇದರಿಂದ ನೀವು ಅದನ್ನು ತಪ್ಪಿಸಬಹುದು. ಮಾನವನ ಮೆದುಳಿಗೆ ಅಪೇಕ್ಷಿತ ಸ್ಥಿತಿ ಹೇಗಿರಬೇಕು ಎಂಬುದರ ಚಿತ್ರಣವನ್ನು ಹೊಂದಿರುವುದು ಬಹಳ ಮುಖ್ಯ. ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳನ್ನು ಎದುರಿಸುವ  ಸಚಿನ್ ತೆಂಡೂಲ್ಕರ್ ಅವರ ವೀಡಿಯೊಗಳನ್ನು ನೋಡಿದ ನಂತರ ಮಹತ್ವಾಕಾಂಕ್ಷಿ ಬ್ಯಾಟ್ಸ್ಮನ್ ತನ್ನ ತಂತ್ರವನ್ನು ರೂಪಿಸುವಂತೆಯೇ, ಮಹತ್ವಾಕಾಂಕ್ಷೆಯ ಅಭ್ಯರ್ಥಿಯು ಟಾಪರ್ಗಳು ಬಳಸಿದ ವಿಧಾನದ ಕುರಿತು ಪರೀಕ್ಷೆಗೆ ತನ್ನ ವಿಧಾನವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಮೆದುಳು ಪ್ರಜ್ಞಾಪೂರ್ವಕವಾಗಿ ಮತ್ತು ಉಪಪ್ರಜ್ಞೆಯಿಂದ ಅನುಸರಿಸಲು ಪ್ರಾರಂಭಿಸಬಹುದಾದ ಸ್ಪೂರ್ತಿದಾಯಕ ವ್ಯಕ್ತಿಗಳಾಗಿ ಟಾಪರ್ಗಳು  ಕಾರ್ಯನಿರ್ವಹಿಸಬಹುದು. ಮಾನಸಿಕ ಪದದಲ್ಲಿ, ಇದನ್ನುನಿಮ್ಮ ಮೆದುಳಿಗೆ ಪ್ರೈಮಿಂಗ್ ಮತ್ತು ಮೆದುಳಿನಲ್ಲಿ ನರ ಮಾರ್ಗಗಳನ್ನು ರಚಿಸುವುದುಎಂದು ಕರೆಯಬಹುದು, ಅದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಅನೇಕ ಪ್ರಮುಖ ಪರೀಕ್ಷೆಗಳು ತಿಂಗಳುಗಳು ಮತ್ತು ವರ್ಷಗಳ ತಯಾರಿಕೆಯನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ನೆನಪಿಡಿ. ದೀರ್ಘಾವಧಿಯು ಹೆಚ್ಚಾಗಿ ರೋಲರ್ ಕೋಸ್ಟರ್ ರೈಡ್ ಆಗಿರಬಹುದು. ಅಭ್ಯರ್ಥಿಗಳು ಚಿತ್ತವನ್ನು ಕಳೆದುಕೊಳ್ಳುತ್ತಾರೆ  ಮತ್ತು ಸ್ಪರ್ಧೆಯಿಂದ ಹೊರಗೆ ಹೋಗುವ ಸಂದರ್ಭಗಳಿವೆ. ಅಂತಹ ಸಮಯದಲ್ಲಿಯೇ ಟಾಪರ್ಗಳ ಸಕಾರಾತ್ಮಕ ಮಾನಸಿಕ ಚಿತ್ರಣವು ನಿಮ್ಮನ್ನು ಮುಂದೆ ಸಾಗುವ ದೀರ್ಘ ಪ್ರಯಾಣದತ್ತ ಗಮನ ಹರಿಸುತ್ತದೆ.

ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಬಯಸುತ್ತೇನೆ.

 

ಆಂಗ್ಲ ಮೂಲ: CSR Editorial

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ