ಪುರಾತನ ಶಾಸ್ತ್ರಗಳು ಹೇಳುವುದೇನೆಂದರೆ ನಾವು ಎಲ್ಲರೂ ಬದುಕಿನ ಅತಿದೊಡ್ಡ ಸಾಗರದಲ್ಲಿ ತೇಲುತ್ತಿರುವ ಶಂಖಗಳಂತೆ. ಎಲ್ಲರೂ ಒಂದೇ ಚೈತನ್ಯದಿಂದ ಹುಟ್ಟಿದರೂ, ಪ್ರತಿಯೊಬ್ಬರ ಬದುಕು ಒಂದಕ್ಕೊಂದು ಹೋಲದು. ನಾವು ಎಷ್ಟೇ ವಿಭಿನ್ನವಾಗಿದ್ದರೂ, ಪರಸ್ಪರ ಅವಲಂಬಿತರಾಗಿದ್ದೇವೆ. ಪ್ರತಿಯೊಬ್ಬರಿಂದಲೂ ಕಲಿಸುವದಕ್ಕೇನಾದರೂ ಇದ್ದೆ ಇರುತ್ತದೆ.
ಜೀವನದ
ಸರ್ವಾಂಗೀಣ ಅರಿವಿಗಾಗಿ, ಐದು ದಿನಗಳನ್ನು ಮೀಸಲಿಡಿ— ಹೆಚ್ಚಲ್ಲ, ಐದಷ್ಟೆ ದಿನಗಳು.
- ಮೊದಲಯ ದಿನ: ರೈತನ ಜೊತೆಯಲ್ಲಿ ಅವನ ಜಮೀನಿಗೆ ಹೋಗಿ. ಬೆಳಗ್ಗೆಯ ಬೆಳಕು ಬೀಳುತ್ತಿರುವಾಗಲೇ ಅವನೊಂದಿಗೆ ಹೋಗಿ, ಅವನು ಏನು ಮಾಡುತ್ತಾನೋ ನೋಡುತ್ತಾ ಇರಿ. ಆಹಾರ ತಯಾರಿಕೆಗೆ ಎಷ್ಟು ಶ್ರಮ ಬೇಕು ಎಂದು ಅರ್ಥವಾಗುತ್ತದೆ. ಆ ದಿನವನ್ನು ರೈತನ ಜೊತೆ ಕಳೆಯುವ ಮೂಲಕ ಆಹಾರದ ಮಹತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ. ಮುಂದೆ ನಾವು ಆಹಾರವನ್ನು ವ್ಯರ್ಥಮಾಡುವಾಗ ಯೋಚಿಸಿ ಮಾಡುತ್ತೇವೆ.
- ಎರಡನೆಯ
ದಿನ: ಜೈಲಿನಲ್ಲಿ (ಯಾವುದೇ ತಪ್ಪು ಮಾಡದೆ ) ಕಳೆಯಿರಿ. ದುಷ್ಟರೆಂದು ಶ್ರೇಣಿಗೊಳಿಸುವ ಬಹುಮಂದಿ ಜೈಲು ಸೇರಿರುವುದು ಕೇವಲ ಪರಿಸ್ಥಿತಿ ಅಥವಾ ಅಜ್ಞಾನದಿಂದ ಆಗಿರಬಹುದು. ಕೋಪದ ಹೊಟ್ಟೆಯಲ್ಲಿ ಏನು ನಡೆದಿದೆ ಎಂಬುದೇ
ಅವರಿಗೇ ಅಜ್ಞಾತವಾಗಿರುವಷ್ಟು ತೀವ್ರ ಮತ್ತು ನಿಯಂತ್ರಣವಿಲ್ಲದ ಸ್ಥಿತಿಗೆ ಅವರು ತುತ್ತಾಗಿರಬಹುದು.
ಅವರ ಕಥೆ ಕೇಳಿದಾಗ, ಅಪರಾಧಿಯ ಒಳಗಿನ ನೊಂದ ಆತ್ಮ ಕಾಣುತ್ತದೆ. ಮನಸ್ಸಿನಲ್ಲಿ ಕರುಣೆ ಮೂಡುತ್ತದೆ. ನಿಮ್ಮ ಹೃದಯದಲ್ಲಿ ಯಾರ ಮೇಲಾದರೂ ಹಗೆ
ಇದ್ದರೆ, ಆ ಹಗೆ ಕರಗಿ ಹೋಗುತ್ತದೆ.
- ಮೂರನೆಯ
ದಿನ: ಶಾಲಾ ಗುರು ಆಗಿ. ಗುರು ಎಂಬ ಪಾತ್ರದ ಅಗತ್ಯ ಎಷ್ಟು ಮುಖ್ಯವೆಂದು ಅರಿವಾಗುತ್ತದೆ. ಜೀವನದ ಯಾವುದೇ ಹಂತದಲ್ಲಿದ್ದರೂ, ಕೆಲವರಿಗೆ ಮಾರ್ಗದರ್ಶನ ಕೊಡಲು ಸಾಧ್ಯ. ಇದರಿಂದ ಆಂತರಿಕ ಸಂತೋಷ ಉಂಟಾಗುತ್ತದೆ. ಗುರು ಅಂದರೆ ಕೇವಲ ಉದ್ದ ಕೂದಲು, ಉದ್ದ ಗಡ್ಡ ಬಿಟ್ಟವರಲ್ಲ, ನಾವೆಲ್ಲರೂ ಯಾರಿಗಾದರೂ ಮಾರ್ಗದರ್ಶನ ನೀಡಬಹುದಾಗಿದೆ. ವಿಶೇಷ ಕೌಶಲ್ಯ ಬೇಕಿಲ್ಲ, ಕೇವಲ ಕರುಣೆ ಸಾಕು. “ನನಗೆ ಏನು ಬೇಕಿಲ್ಲ; ನನ್ನ ವಿದ್ಯಾರ್ಥಿ ಉನ್ನತಿಗೆ ಹೆಜ್ಜೆ ಹಾಕಬೇಕು” ಎಂಬ ನಿಷ್ಕಾಮ ಪ್ರೀತಿ
ನಮ್ಮ ಜೀವನದಲ್ಲಿ ಉದಯಿಸುತ್ತದೆ.
- ನಾಲ್ಕನೆಯ
ದಿನ: ಮಾನಸಿಕ ಆಸ್ಪತ್ರೆಯಲ್ಲಿ ಕಳೆಯಿರಿ. ಅಲ್ಲಿ ಯಾರಾದರೂ ನಿಮಗೆ ಏನು ಹೇಳಿದರೂ, ಅವಮಾನ ಮಾಡಿದರೂ, ನಿಮ್ಮ ಮನಸ್ಸಿಗೆ ತೆಗೆದುಕೊಳ್ಳದಿರಿ. ನೀವು ಎಲ್ಲ ತರಹದ ಟೀಕೆಗಳನ್ನು ಸ್ವೀಕರಿಸುವಷ್ಟು ಶಕ್ತಿಶಾಲಿಯಾಗುವಿರಿ ಮಾತ್ರವಲ್ಲ, ನಿಮ್ಮನ್ನು ಟೀಕಿಸುವವರ ಬಗ್ಗೆ ಕರುಣೆ ಕೂಡ ಉದಯಿಸುತ್ತೆ.ಈ ದಿನದ ಅನುಭವದಿಂದ ಟೀಕೆಯನ್ನು ಸ್ವೀಕರಿಸುವ ಶಕ್ತಿ ಬರುತ್ತದೆ. ನಾವು ತೀರಾ ಸಣ್ಣ ಸಂಗತಿ ಗಳಿಗೆ ಕಳವಳಗೊಳ್ಳುತ್ತೇವೆ. ಟೀಕೆಗೆ ಸ್ಪಂದಿಸಲು ನಾವು ಎಷ್ಟು ಶೀಘ್ರಕ್ರಿಯೆಯಾಗುತ್ತಿದ್ದೇವೆ
ಎಂಬುದರ ಅರಿವು ಬರುತ್ತದೆ. “ಅವನು/ಅವಳು ನನ್ನ ಬಗ್ಗೆ ಏನನುಕೊಳ್ಳುತ್ತಾನೆ?”
ಎಂಬ ಕುತೂಹಲದಲ್ಲಿ ನಾವು ಅಸ್ತವ್ಯಸ್ತಗೊಳ್ಳುತ್ತೇವೆ ಮತ್ತು ಆ ವಿಚಾರಗಳಿಗೆ ಪ್ರತಿಕ್ರಿಯಿಸುತ್ತೇವೆ.
ನೀವು ಟೀಕೆ ನೀಡುವ ಧೈರ್ಯವನ್ನೂ,
ಟೀಕೆ ಸ್ವೀಕರಿಸುವ ಧೈರ್ಯವನ್ನೂ ಹೊಂದಿರಬೇಕು. ನಾವು ಈ ಗುಣವನ್ನು ನಮ್ಮ ಮಕ್ಕಳಿಗೆ ಕಲಿಸಿದರೆ,
ಅವರು ಶಕ್ತಿಶಾಲಿ ಮತ್ತು ಸ್ಥಿರ ವ್ಯಕ್ತಿತ್ವದ ಸಮಾಜದ ಸದಸ್ಯರಾಗುತ್ತಾರೆ.
- ಐದನೇ
ದಿನ: ಸ್ಮಶಾನದಲ್ಲಿ ಕಳೆಯಿರಿ. ನೀವು ಬದುಕಿನ ಕ್ಷಣಿಕತೆಯನ್ನು ಅತ್ಯಂತ
ಹತ್ತಿರದಿಂದ ಹಾಗೂ ಮನಸ್ಸನ್ನು ತಟ್ಟುವ ರೀತಿಯಲ್ಲಿ ಅನುಭವಿಸುತ್ತೀರಿ.. ನಿಮ್ಮಲ್ಲಿರುವ ಎಲ್ಲಾ ದೂರುಗಳು ಮಾಯವಾಗುತ್ತವೆ. “ಸಾವು ಯಾವ ಕ್ಷಣದಲ್ಲಿ ಬಂದೀತೋ ಗೊತ್ತಿಲ್ಲ” ಎಂಬ ಅರಿವು ನಮ್ಮ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.
ಕೇವಲ
ನಾಲ್ಕು ಗೋಡೆಗಳ ಮಧ್ಯದ ಶಿಕ್ಶಣ ಸಾಕಾಗದು. ಬದುಕಿನ
ವಿವಿಧ ಆಯಾಮಗಳನ್ನು ಅನ್ವೇಷಿಸುವುದು ಸಂಪೂರ್ಣ ಶಿಕ್ಷಣ ಪಡೆಯಲು ಅತ್ಯಗತ್ಯ. ನಾವು ಜೀವನದ ಭಿನ್ನ
ಮುಖಗಳನ್ನು ಮನದಿಂದ ಅವಲೋಕಿಸುತ್ತಿದ್ದಾಗ, ಅದು ನಮಗೆ ಆಂತರಿಕ ಸ್ಥೈರ್ಯ ನೀಡುತ್ತದೆ ಮತ್ತು ಆತ್ಮತತ್ವದಲ್ಲಿ
ಆಧಾರಿತವಾಗುವಂತೆ ಮಾಡುತ್ತದೆ.
-ಗುರುದೇವ ಶ್ರೀ ಶ್ರೀ ರವಿಶಂಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ