ಪ್ರಿಯ ಮಿತ್ರ,
ಭಾರತವು
ಯಾವಾಗಲೂ ನಿಧಾನ ಗತಿಯ ರಾಷ್ಟ್ರವಾಗಿದ್ದು, ಸಮಯದ ಗಡುವುಗಳಿಗೆ ಕಡಿಮೆ ಪ್ರಾಮುಖ್ಯತೆಯನ್ನು ಕೊಡುತ್ತಿತ್ತು
. ಒಂದು ನೀತಿಯನ್ನು ಜಾರಿಗೆ ತರಲು, ನ್ಯಾಯಾಲಯದ ಪ್ರಕರಣವನ್ನು ಪರಿಹರಿಸಲು ಮತ್ತು ಕೆಲವು ಸಂದರ್ಭಗಳಲ್ಲಿ,
ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲು ದಶಕಗಳನ್ನು ತೆಗೆದುಕೊಳ್ಳುತ್ತಿತ್ತು. ನಾವು ಈ ಜೀವನ ವಿಧಾನಕ್ಕೆ
ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ ವರ್ಷಗಟ್ಟಲೆ ಚರ್ಚಿಸದೆ ಮತ್ತು ವಿಳಂಬವಿಲ್ಲದೆ ಏನನ್ನಾದರೂ ಮಾಡಿದರೆ,
ಅದನ್ನು ಅನುಮಾನಾಸ್ಪದ ಮತ್ತು ಏನೋ ಸರಿಯಿಲ್ಲವೆಂಬಂತೆ ನೋಡಲಾಗುತ್ತದೆ. ಇದು ಮೋದಿ ಸರ್ಕಾರದ ಬಹು ವೇಗದ ನಿರ್ಧಾರಗಳ ಬಗ್ಗೆ ವಿರೋಧ
ಪಕ್ಷಗಳ ಟೀಕೆಯನ್ನು ವಿವರಿಸುತ್ತದೆ, ಇತ್ತೀಚಿನದು 370 ನೇ ವಿಧಿಯ ಅಗತ್ಯಗಳನ್ನು ರದ್ದುಗೊಳಿಸಿರುವುದು.
70 ವರ್ಷಗಳ ಕಾಲ ಅನೇಕ ಸರ್ಕಾರಗಳು ಮಾಡಲಾಗದ್ದನ್ನು ಮೋದಿ ಸರ್ಕಾರದ ಎರಡನೇ ಅಧಿಕಾರಾವಧಿಯ 70 ದಿನಗಳಲ್ಲಿ
ಮಾಡಲಾಯಿತು. ಕುತೂಹಲಕಾರಿಯಾದ ವಿಚಾರವೆಂದರೆ , ಸರ್ಕಾರದ ಕಟು ಟೀಕಾಕಾರರು ಸಹ ಆರ್ಟಿಕಲ್ 370 ಅನ್ನು
ತೆಗೆದುಹಾಕುವ ನಿರ್ಧಾರವನ್ನು ವಿರೋಧಿಸುವುದಿಲ್ಲ, ಆದರೆ 'ತುಂಬಾ ತ್ವರಿತವಾಗಿ' ಅಥವಾ ಚರ್ಚೆಯಿಲ್ಲದೆ
ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ 'ಚಿಂತಿತರಾಗಿದ್ದಾರೆ'. ಒಂದು ಸರಕಾರ ಸಕಾಲದಲ್ಲಿ ದೃಢ ನಿರ್ಧಾರ
ಕೈಗೊಂಡಾಗ ‘ಯಾಕೆ ಬೇಡ’ ಎಂದು ಹೇಳುವ ಬದಲು ‘ಯಾಕೆ’
ಎಂಬ ಪ್ರಶ್ನೆಯನ್ನು ಕೇಳುವ ನಮ್ಮ ಧೋರಣೆ ಎಷ್ಟರಮಟ್ಟಿಗೆ ಸರಿ ಹಾಗೂ ಜವಾಬ್ದಾರಿಯುತವಾಗಿದೆ ?
70
ವರ್ಷಗಳ ಹಳೆಯ ಸಮಸ್ಯೆಗೆ 70 ದಿನಗಳ ಪರಿಹಾರ
ಸ್ವಾತಂತ್ರ್ಯಾ
ನಂತರದ ಮೊದಲ ಕೇಂದ್ರ ಸರ್ಕಾರದಿಂದ ಆನಂತರ ಬಂದ ನಮ್ಮ ಎಲ್ಲಾ ಸರ್ಕಾರಗಳು 'ಕಾಶ್ಮೀರ ಸಮಸ್ಯೆಯನ್ನು'
ಸಂಪ್ರದಾಯದಂತೆ ಮುಂದಿನ ಸರ್ಕಾರಗಳಿಗೆ ವರ್ಗಾಯಿಸುವುದನ್ನು
ಬಿಟ್ಟರೆ ವಾಸ್ತವವಾಗಿ ಏನನ್ನೂ ಮಾಡದೆ ಹೋರಾಡುತ್ತಿವೆ. ಕೆಲವರು ಮಾತುಕತೆ ನಡೆಸಿದ್ದರೆ, ಇನ್ನು ಕೆಲವರು
ವಿಶೇಷ ಪ್ರತಿನಿಧಿಗಳನ್ನು ನೇಮಿಸಿದ್ದರು; ಆದರೆ ಅವುಗಳಿಂದ ವಾಸ್ತವವಾಗಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಲಿಲ್ಲ. ಕಾಶ್ಮೀರ ಸಮಸ್ಯೆಯನ್ನು ನಿಜವಾಗಿ ಪರಿಹರಿಸುವುದಕ್ಕಿಂತ
ಜೀವಂತವಾಗಿರಿಸುವುದು ಹೆಚ್ಚು ಉಪಯುಕ್ತ ಎಂಬ ಹಂತವನ್ನು ಕೆಲವು ಪಕ್ಷಗಳ ಅಭಿಮತವಾಗಿತ್ತು. ಈ ಜಡ ಧೋರಣೆಯ
ಬೆಲೆ ಸಾವಿರಾರು ಜೀವಗಳು ಮತ್ತು ಕಾಶ್ಮೀರಿ ಜನರಲ್ಲಿ ತಮ್ಮದೇ ರಾಷ್ಟ್ರೀಯ ಸರ್ಕಾರದ ಬಗ್ಗೆ ಅಪನಂಬಿಕೆ.
ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಕಡಿಮೆಯೇನೂ ಆಗಿಲ್ಲ. ಡಿಸೆಂಬರ್ 2018 ರಲ್ಲಿ ಮಂಡಿಸಲಾದ
FY 2019-20 ರ ರಾಜ್ಯ ಬಜೆಟ್ ಪ್ರಕಾರ, ರಾಜ್ಯದ ಒಟ್ಟು ವೆಚ್ಚವನ್ನು ರೂ. 88,911 ಕೋಟಿ, ಹಿಂದಿನ
ಹಣಕಾಸು ವರ್ಷಕ್ಕಿಂತ 10% ಕ್ಕಿಂತ ಹೆಚ್ಚು. ರಾಜ್ಯಕ್ಕೆ ವರ್ಗಾವಣೆಯ ರೂಪದಲ್ಲಿ ಕೇಂದ್ರ ಸರ್ಕಾರದ
ಕೊಡುಗೆ ಮತ್ತು ಸಹಭಾಗಿತ್ವದ ರಾಜ್ಯದ ಪಾಲು ಮೊತ್ತದ
55% ಕ್ಕೆ ಸಮನಾಗಿರುತ್ತದೆ. ಪಾಕಿಸ್ತಾನ ನಡೆಸಿದ ಪ್ರಾಕ್ಸಿ ಯುದ್ಧವನ್ನು ವಿಫಲಗೊಳಿಸಲು ಈ ಭಾರೀ
ಹೂಡಿಕೆ ಅಗತ್ಯವೆಂದು ಪರಿಗಣಿಸಲಾಗಿದೆ. ತಮ್ಮ ಸ್ವಾತಂತ್ರ್ಯ ದಿನದ ಭಾಷಣದ ಸಮಯದಲ್ಲಿ, ಪ್ರಧಾನ ಮಂತ್ರಿ
ಸ್ವತಃ ಈ ವಿಷಯವನ್ನು ನಮ್ಮ ಮುಂದಿಟ್ಟರು, “ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಉದ್ಯಮಿಗಳು ಮುಂದೆ
ಬರಬೇಕೆಂದು ನಾನು ಒತ್ತಾಯಿಸುತ್ತೇನೆ, ಏಕೆಂದರೆ ನಾವು ಅದರ ಉತ್ಪನ್ನಗಳನ್ನು ಪ್ರಪಂಚದಾದ್ಯಂತ ತೆಗೆದುಕೊಂಡು
ಹೋಗಬೇಕಾಗಿದೆ. ಲಡಾಖ್ ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ಅವಕಾಶ ಹಾಗೂ ಸಾಮರ್ಥ್ಯವನ್ನು
ಹೊಂದಿದೆ ಮತ್ತು ಇದು ಸೌರಶಕ್ತಿ ಕೇಂದ್ರವೂ ಆಗಬಹುದು.”
ರಾಜ್ಯವು
ತನ್ನದೇ ಆದ ಸಂವಿಧಾನವನ್ನು ಹೊಂದಲು ಮತ್ತು ತನ್ನದೇ ಆದ ಕಾನೂನುಗಳನ್ನು ಮಾಡಿಕೊಳ್ಳಲು ಅನುಮತಿಸಿದ
370 ನೇ ವಿಧಿಯು ರಾಜ್ಯದ ಅಭಿವೃದ್ಧಿಗೆ ಕೀಲಿಯಾಗಿರಬೇಕಿತ್ತು, ಏಕೆಂದರೆ ಅಂತಹ ಸ್ವಾಯತ್ತತೆಯು ರಾಜ್ಯಕ್ಕೆ
ಆರ್ಥಿಕ ಮತ್ತು ಪ್ರವಾಸಿ ಆಕರ್ಷಣೆಯಾಗಿ ತನ್ನನ್ನು ಸ್ಥಾಪಿಸಿಕೊಳ್ಳಲು ಸಾಕಷ್ಟು ಮುಕ್ತ ಹಸ್ತವನ್ನು
ನೀಡಿತು. ಹಾಂಗ್ ಕಾಂಗ್ ಮತ್ತು ಸಿಂಗಾಪುರ ಏನು ಸಾಧಿಸಲು ಸಾಧ್ಯವಾಯಿತೋ ಹಾಗೆ. ರಾಜ್ಯದ ಬೃಹತ್ ಪ್ರವಾಸಿ
ಸಾಮರ್ಥ್ಯವು ಇನ್ನೂ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗದೆ ಉಳಿದಿದೆ. ಹೆಚ್ಚುವರಿಯಾಗಿ, ರಾಜ್ಯದಲ್ಲಿನ
ಪ್ರತಿಕೂಲ ವಾತಾವರಣದಿಂದಾಗಿ, ಹೂಡಿಕೆಗಳು ಮತ್ತು ಉದ್ಯೋಗಾವಕಾಶಗಳು ಕಾಣೆಯಾಗಿವೆ. ಸೆಂಟರ್ ಫಾರ್
ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ನಿರುದ್ಯೋಗದ ಮಾಸಿಕ ಸಮಯದ ಸರಣಿಯ ಮಾಹಿತಿಯ ಪ್ರಕಾರ, ಎಲ್ಲಾ
ರಾಜ್ಯಗಳಿಗೆ ಹೋಲಿಸಿದರೆ, ಜಮ್ಮು ಮತ್ತು ಕಾಶ್ಮೀರವು ಜನವರಿ 2016 ಮತ್ತು ಜುಲೈ 2019 ರ ನಡುವೆ ಗರಿಷ್ಠ
ಮಾಸಿಕ ಸರಾಸರಿ ನಿರುದ್ಯೋಗ ದರ 15% ಅನ್ನು ಹೊಂದಿದೆ. ಇದು ರಾಷ್ಟ್ರೀಯಕ್ಕಿಂತ ಎರಡು ಪಟ್ಟು ಹೆಚ್ಚು.
ಆ ಅವಧಿಯಲ್ಲಿ ಮಾಸಿಕ ಸರಾಸರಿ ನಿರುದ್ಯೋಗ ದರ 6.4%. 2013-14 ರಲ್ಲಿ 4.3% ರಿಂದ 2018-19 ರಲ್ಲಿ
0.02 % ಗೆ ದೇಶಾದ್ಯಂತ ಘೋಷಿಸಲಾದ ಒಟ್ಟು ಹೊಸ ಯೋಜನೆಗಳಲ್ಲಿ ರಾಜ್ಯದ ಪಾಲು ಕುಸಿತಕ್ಕೆ ಕಾರಣವಾಯಿತು.
ಸಮಸ್ಯೆಗಳಿಗೆ
ಪರಿಹಾರದ ಅಗತ್ಯವಿದೆಯೇ ಹೊರತು ಚರ್ಚೆಗಳಲ್ಲ
ಕಾಶ್ಮೀರದ
ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಕೇವಲ ಆರ್ಟಿಕಲ್ 370 ರ ವಾಸ್ತವಿಕ ರದ್ದತಿ ಸಾಕಾಗುವುದಿಲ್ಲ
ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆದಾಗ್ಯೂ, 7 ದಶಕಗಳಲ್ಲಿ ಮೊದಲ ಬಾರಿಗೆ ಸರ್ಕಾರವು ಈ ವಿಷಯದ
ಬಗ್ಗೆ ಕೇವಲ ಚರ್ಚೆ ಮಾಡುವ ಬದಲು ಈ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇಡುವ ಧೈರ್ಯವನ್ನು ತೋರಿಸಿದೆ. ನಾವು ಒಂದು ನಿರ್ಧಾರವನ್ನು
ತೆಗೆದುಕೊಂಡು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸದ ಹೊರತು, ನಾವು ಸರಿಯೋ ತಪ್ಪೋ
ಎಂದು ನಮಗೆ ತಿಳಿದಿರುವುದಿಲ್ಲ. ಆರಂಭದ ಸ್ಥಳದಲ್ಲೇ
ಅಂಟಿಕೊಳ್ಳುವುದು ಮತ್ತು ಗಮ್ಯಸ್ಥಾನವನ್ನು ತಲುಪಲು ಯಾವ ರಸ್ತೆಯಲ್ಲಿ ಹೋಗಬೇಕೆಂದು ಯೋಚಿಸುವುದು
ಮೂರ್ಖತನವಾದೀತು. ಇನ್ನೂ ಶ್ಲಾಘನೀಯ ಸಂಗತಿಯೆಂದರೆ, ಇದೇ ರೀತಿಯ ಧೋರಣೆಯನ್ನು ಮೋದಿ ಸರ್ಕಾರವು ಅನೇಕ
ರಂಗಗಳಲ್ಲಿ ತೋರಿಸಿದೆ. ನೋಟು ಅಮಾನ್ಯೀಕರಣದ ನಿರ್ಧಾರವಾಗಲಿ, ತ್ರಿವಳಿ ತಲಾಖ್ ಅಪರಾಧವಾಗಲಿ, ಉರಿ
ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್ ಆಗಲಿ, ಇತರ ರಾಜಕೀಯ ಪಕ್ಷಗಳೊಂದಿಗೆ ಸಾಕಷ್ಟು ಚರ್ಚೆ ನಡೆಸದೆ
ಟೀಕೆಗೆ ಗುರಿಯಾಗುತ್ತಿದ್ದರೂ ಮೋದಿ ಸರಕಾರ ಕ್ರಮ ಕೈಗೊಳ್ಳುವ ತನ್ನ ದೃಢ ಸಂಕಲ್ಪವನ್ನು ತೋರಿಸಿದೆ.
ಸ್ವತಃ ಪ್ರಧಾನಮಂತ್ರಿಯವರು ಹಿಂದಿನ ಆಸನವನ್ನು ತೆಗೆದುಕೊಳ್ಳುವ ಬದಲು ಈ ಬದಲಾವಣೆಗಳ ಮುಖವಾಗಿ ತಮ್ಮನ್ನು
ತಾವು ಮುಂದೆ ನಿಂತು ಮುನ್ನಡೆಸಲು ಸಿದ್ಧರಿದ್ದಾರೆ
ಮತ್ತು ವಿಷಯಗಳು ತಾವಾಗಿಯೇ ಪರಿಹಾರಕಾಣಲಿ ಎಂದು ಬಿಡದೆ, ಇದು ಸ್ವತಃ ಸ್ವಾಗತಾರ್ಹ ಬದಲಾವಣೆಯಾಗಿದೆ.
ಕಾಶ್ಮೀರವನ್ನು
ಸಹಜ ಸ್ಥಿತಿಗೆ ತರಲು ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ. ಸ್ಥಳೀಯ ಜನರ ವಿಶ್ವಾಸವನ್ನು ಗೆಲ್ಲುವುದು
ಕಾಶ್ಮೀರದಲ್ಲಿ ಮೆರಗು ತರುವ ಕೆಲಸ ಹಾಗೂ ಸರ್ಕಾರಕ್ಕೆ ಮೆರುಗು ತರುವಂತಹುದು. ಇದು ಸುಲಭವಲ್ಲವಾದರೂ,
ನಮ್ಮ ಚುನಾಯಿತ ಸರ್ಕಾರವು ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಮನಸ್ಥಿತಿ ಹೊಂದಿದೆ ಹಾಗೂ
ದೃಢ ನಿರ್ಧಾರವನ್ನೂ ಹೊಂದಿದೆ ಎಂಬುದೇ ಸಮಾಧಾನಕರವಾದ ಸಂಗತಿ. ಬದಲಾವಣೆಯು ನೆಲದ ಮೇಲೆ ನಡೆಯುತ್ತದೆಯೇ ಹೊರತು ಕಾನ್ಫರೆನ್ಸ್
ಹಾಲ್‌ಗಳಲ್ಲಿ ಅಥವಾ ಚರ್ಚೆಯ ಐಷಾರಾಮಿ ಕೊಠಡಿಗಳಲ್ಲಿ ಅಲ್ಲ. ನಮ್ಮ ಪ್ರಧಾನಿ ತೋರಿಸಿದಂತೆ ನಮ್ಮ ಕೋಣೆಗಳಿಂದ
ಹೊರಬಂದು ನೆಲಕ್ಕೆ ಅಡಿಯಿಡುವ ಸಮಯ ಇದಾಗಿದೆ.
ಆಂಗ್ಲ
ಮೂಲ: CSR Editorial