ಶನಿವಾರ, ಸೆಪ್ಟೆಂಬರ್ 13, 2025

ಕಥೆ ಹೇಳುವಿಕೆ: ಮಾನಸಿಕ ಆರೋಗ್ಯಕ್ಕೆ ಲಾಭ

ಕಥೆ ಹೇಳುವಿಕೆ (Story Telling) ಕೇವಲ ಮನರಂಜನೆಗೆ ಮಾತ್ರವಲ್ಲಅದು ಭಾವನಾತ್ಮಕ ಔಷಧಿ, ಬೌದ್ಧಿಕ ಬೆಳವಣಿಗೆ ಮತ್ತು ಸಮಾಜದ ವಿಭಿನ್ನ ಜನರ  ಸಂಪರ್ಕಕ್ಕೆ ಶಕ್ತಿಯುತ ಸಾಧನವಾಗಿದೆ. ಮಾತು, ಬರವಣಿಗೆ ಅಥವಾ ಕಲೆಯ ಮೂಲಕ ಹಂಚುವ ಕಥೆಗಳು ನಮ್ಮ ಹಾಗೂ ಬೇರೆಯವರ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಜನರ ಮಾನಸಿಕ ಆರೋಗ್ಯವನ್ನು ರೂಪಿಸುತ್ತವೆ.

ಕಥೆ ಹೇಳುವಿಕೆಯ ಮನೋವಿಜ್ಞಾನ:

ನಿರೂಪಣಾ ಮನಶಾಸ್ತ್ರ (Narrative Psychology)  ಪ್ರಕಾರ, ನಾವು ನಮ್ಮ ಜೀವನದ ಕಥೆಗಳನ್ನು ಹೇಗೆ ಹೇಳುತ್ತೇವೆ ಎಂಬುದು ನಮ್ಮ ಮನಸ್ಸಿನ ಸ್ಥಿತಿಗೆ ಪ್ರಭಾವ ಬೀರುತ್ತದೆ. ಡಾ. ಆನಿ  ಬ್ರೂಸ್ಟರ್ (Dr. Annie Brewster) ಅವರ Health Story Collaborative ಸಂಸ್ಥೆಯು, ಕಥೆ ಹೇಳುವಿಕೆ ಸಂಪರ್ಕವನ್ನು ಬೆಳೆಸುತ್ತದೆ ಮತ್ತು ದುಃಖ ಅಥವಾ ರೋಗದ ಅನುಭವಗಳನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

ಕಥೆ ಹೇಳುವಿಕೆಯಿಂದ ಉಂಟಾಗುವ ಲಾಭಗಳು:

  • ಕೇಳುವಿಕೆ ಮತ್ತು ಕಲ್ಪನೆಯ ಶಕ್ತಿಯನ್ನು ಹೆಚ್ಚಿಸುತ್ತದೆ:
    ಕಥೆಗಳಲ್ಲಿ ತೊಡಗುವಿಕೆ ಗಮನವನ್ನು ಹೆಚ್ಚಿಸುತ್ತದೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ.
  • ಸಹಾನುಭೂತಿ ಮತ್ತು ಸ್ಮರಣಶಕ್ತಿಗೆ ಉತ್ತೇಜನ:
    ಕಥೆಗಳು ದೇಹದಲ್ಲಿ ಆಕ್ಸಿಟೋಸಿನ್ (oxytocin) ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಸಂಬಂಧಗಳನ್ನು ಗಾಢಗೊಳಿಸುತ್ತದೆ.
  • ಮನೋಭಾವವನ್ನು ಉತ್ತಮಗೊಳಿಸುತ್ತದೆ:
    ಸಕಾರಾತ್ಮಕ ಕಥೆಗಳು ಭಾವನೆಗಳನ್ನು ಬದಲಾಯಿಸುತ್ತವೆ, ಧೈರ್ಯವನ್ನು ಹೆಚ್ಚಿಸುತ್ತವೆ.
  • ಮೂಢಾವಸ್ಥೆ ನಿರ್ವಹಣೆಗೆ ಸಹಾಯ:
    ನೆನಪಿನ ಚಿಕಿತ್ಸೆಯು ಹಿರಿಯರಲ್ಲಿನ ಸ್ಮರಣಶಕ್ತಿಗೆ ಸಹಾಯ ಮಾಡುತ್ತದೆ.
  • ಸಂವಹನ ಕೌಶಲ್ಯವನ್ನು ಬೆಳೆಸುತ್ತದೆ:
    ತಮ್ಮ ವಿಚಾರಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ವಿಜ್ಞಾನಿಗಳೂ ಸಹ ಕಥೆ ಹೇಳುವಿಕೆಯನ್ನು ಬಳಸುತ್ತಿದ್ದಾರೆ.
  • ಯಶಸ್ಸು ಮತ್ತು ವಿಫಲತೆಯಿಂದ ಬಲವರ್ಧನೆ:
    ಹಳೆಯ ಅನುಭವಗಳನ್ನು ಪುನರ್ವ್ಯಾಖ್ಯಾನ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚುತ್ತದೆ.

ನಿಮ್ಮ ಕಥೆಯನ್ನು ಪುನರ್ರಚನೆ ಮಾಡುವುದು:

ನಿರೂಪಣಾ ಮನಶಾಸ್ತ್ರ (Narrative Psychology) ವು  ವ್ಯಕ್ತಿಗೆ ತಮ್ಮ ನಂಬಿಕೆಗಳನ್ನು ಪ್ರಶ್ನಿಸಲು ಮತ್ತು ಹೊಸ ದೃಷ್ಟಿಕೋನದಿಂದ ತಮ್ಮ ಕಥೆಗಳನ್ನು ನಿರೂಪಣೆಯ ಮೂಲಕ ರೂಪಿಸಲು ಪ್ರೇರೇಪಿಸುತ್ತದೆ. ಕಥೆಯ ಮೂಲಕ   ದುಃಖದೊಳಗಿನ ಅರ್ಥವನ್ನು ಹುಡುಕುವವರ ನೋವಿಗೆ ಸಮಾಧಾನ ಹಾಗೂ  ಹೆಚ್ಚು ಸುಖವಾಗಿ ಬದುಕುತ್ತಾರೆ.

ಕೊನೆಯ ಮಾತು:

ಕಥೆ ಹೇಳುವಿಕೆ ನಮ್ಮನ್ನು ಜನರೊಂದಿಗೆ ಬೆಸೆಯುತ್ತದೆ, ಪ್ರತಿಬಿಂಬಿಸುತ್ತದೆ ಮತ್ತು ಬೆಳೆಯುವಂತೆ ಮಾಡುತ್ತದೆ. ನಾವು ನಮ್ಮ ಕಥೆಗಳನ್ನು ಹಂಚಿಕೊಳ್ಳುವಾಗ ಮತ್ತು ಇತರರ ಕಥೆಗಳನ್ನು ಕೇಳುವಾಗ, ನಾವು ವ್ಯಕ್ತಿಗತವಾಗಿ ಹಾಗೂ ಸಾಮೂಹಿಕವಾಗಿ ಧನಾತ್ಮಕತೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತೇವೆ  ಮತ್ತು ನಮ್ಮ ಸ್ವಂತ ಮನಸ್ಸನ್ನು ಆರೋಗ್ಯಕರವಾಗಿ ಪೋಷಿಸುತ್ತೇವೆ.


ಆಂಗ್ಲ ಮೂಲ:   Barbara Field ("Verywell Mind")

ನಿಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಲು ಏಳು ಉಪಾಯಗಳು


ಉದ್ದೇಶಪೂರ್ಣ ಜೀವನವು ಆರೋಗ್ಯ, ಸಂತೋಷ ಮತ್ತು ಆಂತರಿಕ ತೃಪ್ತಿಗೆ ದಾರಿ ಮಾಡಿಕೊಡುತ್ತದೆ. Verywell Mind ವೆಬ್ಸೈಟ್ ಲೇಖಕಿ ಎಮಿ ಮೊರಿನ್ ಅವರು ನೀಡಿರುವ ಲೇಖನದಲ್ಲಿ, ಜೀವನದ ಉದ್ದೇಶವನ್ನು ಹುಡುಕಲು ಅಥವಾ ರೂಪಿಸಲು 7 ಪರಿಣಾಮಕಾರಿ ಮಾರ್ಗಗಳನ್ನು ವಿವರಿಸಲಾಗಿದೆ.

ಉದ್ದೇಶಪೂರ್ಣ ಜೀವನದ ಮಹತ್ವ

·         ಶಕ್ತಿಯುತವಾದ ಜೀವನ ಉದ್ದೇಶ ಹೊಂದಿರುವ ವ್ಯಕ್ತಿಗಳು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಅನುಭವಿಸುತ್ತಾರೆ.

·         ಹೃದಯಾಘಾತ, ಮಿದುಳಿನ ಘಾತ (ಲಕ್ವ), ಮರೆವಿನ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ.

·         ಉತ್ಸಾಹ, ತಾಳ್ಮೆ ಮತ್ತು ಮಾನವ ಹಾಗೂ ಪ್ರಕೃತಿಯೊಂದಿಗಿನ ಸಂಬಂಧಗಳಲ್ಲಿನ ಆಳ ಹೆಚ್ಚಾಗುತ್ತದೆ.

 

ಜೀವನದ ಉದ್ದೇಶವನ್ನು ಕಂಡುಕೊಳ್ಳಲು ಏಳು ಮಾರ್ಗಗಳು

  1. ಸಮಯ, ಹಣ ಅಥವಾ ಪ್ರತಿಭೆಯನ್ನು ದಾನಮಾಡಿ

·         ಸೇವಾ ಮನೋಭಾವನೆ ಜೀವನಕ್ಕೆ ಅರ್ಥ ನೀಡುತ್ತದೆ.

·         ಸೇವಾ ಮನೋಭಾವ  ಅಥವಾ ನೆರವಿನ ಕಾರ್ಯಗಳು ಸ್ವಾರ್ಥವನ್ನು ಕಡಿಮೆ ಮಾಡುತ್ತವೆ.

 

  1. ಇತರರಿಂದ ಪ್ರತಿಕ್ರಿಯೆ ಕೇಳಿ

·         ಜನರು ನಿಮ್ಮ ಶಕ್ತಿಗಳನ್ನು ನಿಮಗೆ ಅರಿವಿಲ್ಲದಂತೆ  ಗುರುತಿಸುತ್ತಾರೆ.

·         ಅವರು ನೀಡುವ ಶ್ಲಾಘನೆಗಳು ನಿಮ್ಮ ಉತ್ಸಾಹದ ದಿಕ್ಕು ಬದಲಿಸಬಹುದು.

 

  1. ಧನಾತ್ಮಕ ವ್ಯಕ್ತಿಗಳೊಂದಿಗೆ ಕಾಲ ಕಳೆಯಿರಿ

·         ನಿಮ್ಮ ಸುತ್ತಲಿನ ಜನರು ನಿಮ್ಮ ಮನೋಭಾವನೆಗಳಿಗೆ  ಪ್ರಭಾವ ಬೀರುತ್ತಾರೆ.

·         ಉತ್ಸಾಹಭರಿತ ವ್ಯಕ್ತಿಗಳು ನಿಮ್ಮಲ್ಲೂ ಪ್ರೇರಣೆಯನ್ನು ಹುಟ್ಟಿಸುತ್ತಾರೆ.

 

  1. ಹೊಸ ಜನರೊಂದಿಗೆ ಸಂಭಾಷಣೆ ಆರಂಭಿಸಿ

·         ಅನ್ಯರೊಂದಿಗೆ ಮಾತನಾಡುವುದು ಹೊಸ ಆಲೋಚನೆಗಳನ್ನು ಪರಿಚಯಿಸುತ್ತದೆ.

·         ಹೊಸ ಆಸಕ್ತಿಗಳು ಅಥವಾ ಉದ್ದೇಶಗಳು ಮೂಲಕ ಬೆಳೆಯಬಹುದು.

 

  1. ನಿಮ್ಮ ಆಸಕ್ತಿಗಳನ್ನು ಅನ್ವೇಷಿಸಿ

·         ಯಾವ ವಿಷಯಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬುದನ್ನು ಗಮನಿಸಿ ಗುರುತಿಸಿಕೊಳ್ಳಿ.

·         ಸಾಮಾಜಿಕ ಮಾಧ್ಯಮದ ಬಳಕೆ ಅಥವಾ ನಿಮ್ಮ ಮಾತುಗಳಲ್ಲಿ ಪುನರಾವರ್ತನೆಯಿರುವ ವಿಷಯಗಳು ನಿಮಗೆ  ಸುಳಿವು ನೀಡಬಹುದು.

 

  1. ನಿಮ್ಮನ್ನು ಕಾಡುವ ಸಮಾಜದ ಅಸಮಾನತೆಗಳ ಬಗ್ಗೆ ಯೋಚಿಸಿ

·         ಸಮಾಜದ ಸಮಸ್ಯೆಗಳ ಬಗ್ಗೆ ನಿಮ್ಮ ಭಾವನೆಗಳು ನಿಮ್ಮ ಉದ್ದೇಶದ ದಿಕ್ಕು ತೋರಿಸಬಹುದು.

·         ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳಲ್ಲಿ ತೊಡಗುವುದರಿಂದ ನಿಮ್ಮ ಜೀವನ ಅರ್ಥಪೂರ್ಣವಾಗಿರುತ್ತದೆ.

 

 

7.      ನೀವು ಏನೇ ಕೆಲಸ ಮಾಡಿದರೂ ಪ್ರೀತಿಯಿಂದ ಮಾಡಿರಿ

·         ನಿಮ್ಮ ಹವ್ಯಾಸಗಳು ಮತ್ತು ಕೌಶಲ್ಯಗಳು ಸೇವೆಯ ರೂಪದಲ್ಲಿ ತೊಡಗಿಸಿಕೊಂಡರೆ ಅರ್ಥಪೂರ್ಣವಾಗಬಹುದು.

·         ನಿಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಮೀಸಲಿಟ್ಟರೆ ಅದು ಆತ್ಮತೃಪ್ತಿ ಹಾಗೂ ಸಂತೋಷವನ್ನು ತರುತ್ತದೆ.


ನೀವು ನಿಮ್ಮ ಜೀವನದ ಉದ್ದೇಶವನ್ನು ಕಂಡುಕೊಂಡಿದ್ದೀರೆಂದು ತಿಳಿಯುವುದು ಹೇಗೆ?

·         ನೀವುನನ್ನ ಜೀವನ ಉದ್ದೇಶ ಏನು?” ಎಂಬ ಪ್ರಶ್ನೆ ಕೇಳಿಕೊಳ್ಳುವುದನ್ನು ನಿಲ್ಲಿಸಿದಾಗ.

·         ನಿಮ್ಮಲ್ಲಿ ಹಾಗೂ ನಿಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸಂತೋಷ, ತೃಪ್ತಿ, ಸಂಬಂಧಗಳಲ್ಲಿ ಹೊಂದಾಣಿಕೆ ಅಥವಾ ಉತ್ತಮವಾಗುವುದನ್ನು ಕಂಡಾಗ. 

·         ಒಂದು ಉದ್ದೇಶ ಸಾಧಿಸಿದಾಗ ಹೊಸ ಉದ್ದೇಶಗಳು ಹುಟ್ಟಿಕೊಳ್ಳುತ್ತವೆ ಅಥವಾ ಬದಲಾಗಬಹುದು ಅದು ಸಹಜ.

ಕೊನೆಯ ಮಾತು 

ಜೀವನ ಉದ್ದೇಶವು ಕೆಲವೊಮ್ಮೆಹುಡುಕುವವಿಷಯವಲ್ಲಅದುರಚಿಸುವವಿಷಯ. ಸಣ್ಣ ಸೇವಾ ಕಾರ್ಯಗಳಿಂದ ಹಿಡಿದು ದೊಡ್ಡ ಜೀವನದ ಬದಲಾವಣೆಗಳವರೆಗೆ, ಅರ್ಥವು ಉದ್ದೇಶಪೂರ್ಣ ಬದುಕಿನಲ್ಲಿ ಮೂಡುತ್ತದೆ.


ಆಂಗ್ಲ ಮೂಲ: Amy Morin, LCSW 

ಶನಿವಾರ, ಸೆಪ್ಟೆಂಬರ್ 6, 2025

ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂಬತ್ತು ಉಪಾಯಗಳು

. ಇತರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸು

  • Ø     ಹೋಲಿಕೆ ಮಾಡುವುದು ನಮ್ಮ ವೈಯಕ್ತಿಕ ಪಥವನ್ನು ಮರೆಮಾಡುತ್ತದೆ. ಪ್ರತಿಯೊಬ್ಬರ ಜೀವನದ         ವೇಗ, ಗುರಿ, ಗ್ರಹಿಕೆ, ಶಕ್ತಿ, ಸಾಮರ್ಥ್ಯ ಮತ್ತು ಹಿನ್ನಲೆ ವಿಭಿನ್ನವಾಗಿರುತ್ತದೆ.
  • Ø          ನೀನು ಎಲ್ಲಿ ಇದ್ದೀಯ, ಎಷ್ಟು ಬೆಳೆಯುತ್ತಿದ್ದೀಯ ಎಂಬುದನ್ನು ಗುರುತಿಸು.
  • Ø  ನಿನ್ನ ಬೆಳವಣಿಗೆಗೆ ಹೋಲಿಕೆಯ ಬದಲು ಪ್ರೇರಣೆಯಾಗಿ ಇತರರನ್ನು ನೋಡು.

. ಧನಾತ್ಮಕ ವ್ಯಕ್ತಿಗಳೊಂದಿಗೆ ಸಮಯ ಕಳೆಯಿರಿ

  • Ø  ಧನಾತ್ಮಕತೆ ಹರಡುವ ಶಕ್ತಿ ಹೊಂದಿದೆ.
  • Ø  ನಿನ್ನ ಕನಸುಗಳನ್ನು ಗೌರವಿಸುವ, ನಿನ್ನ ಶಕ್ತಿಗಳನ್ನು ಗುರುತಿಸುವ ಜನರೊಂದಿಗೆ ಇರಲು ಪ್ರಯತ್ನಿಸು. ಅಂತಹ ಸಾನ್ನಿಧ್ಯವು ನಿನ್ನ ಆತ್ಮವಿಶ್ವಾಸಕ್ಕೆ ಪೋಷಣೆಯಂತೆ ಕೆಲಸ ಮಾಡುತ್ತದೆ.

. ದೇಹದ ಆರೈಕೆ ಮಾಡು

  • Ø  ಆರೋಗ್ಯವು ಆತ್ಮವಿಶ್ವಾಸದ ಮೂಲಭೂತ ಅಂಶ.
  • Ø  ನಿತ್ಯ ವ್ಯಾಯಾಮ, ಸಮತೋಲನ ಆಹಾರ, ಮತ್ತು ನಿದ್ರೆಇವು ಮನಸ್ಸಿನ ಸ್ಥಿರತೆಯನ್ನು ಹೆಚ್ಚಿಸುತ್ತವೆ. ನಿನ್ನ ದೇಹವನ್ನು ಗೌರವಿಸುವುದು ನಿನ್ನನ್ನು ಒಳಗಿನಿಂದ ಬಲಿಷ್ಠಗೊಳಿಸುತ್ತದೆ.

. ನಿನ್ನ ಮೇಲೆ ದಯೆ ಇರಿಸು

  • Ø  ತಪ್ಪುಗಳು ಜೀವನದ ಭಾಗ. ಅವುಗಳಿಂದ ಕಲಿಯುವುದು ಬೆಳವಣಿಗೆಯ ಸಂಕೇತ.
  • Ø  ನಿನ್ನೊಳಗಿನ ಆತ್ಮಸ್ನೇಹಿತನನ್ನು ಬೆಳೆಸಿಕೋ.
  • Ø  "ನಾನು ಪ್ರಯತ್ನಿಸುತ್ತಿದ್ದೇನೆ" ಎಂಬ ನುಡಿಯನ್ನು " ನಾನು ವಿಫಲನಾದೆ " ಎಂಬ ನುಡಿಯ ಬದಲು ಬಳಸು.

. ಧನಾತ್ಮಕ ಸ್ವಯಂ ಮಾತು (ಸ್ವಭಾಷಣ) ಅಭ್ಯಾಸ ಮಾಡು

  • Ø  ನಿನ್ನೊಳಗಿನ ಮಾತುಗಳು ನಿನ್ನ ನಂಬಿಕೆಯನ್ನು ರೂಪಿಸುತ್ತವೆ.
  • Ø  "ನಾನು ಮಾಡಬಲ್ಲೆ" ಎಂಬ ನುಡಿಗಳು ನಿನ್ನ ಮನಸ್ಸಿನ ಧ್ವನಿಯಾಗಲಿ.
  • Ø  ಋಣಾತ್ಮಕ ಚಿಂತನೆಗಳನ್ನು ಪ್ರಶ್ನಿಸಿ, ಅವುಗಳ ಹಿಂದಿರುವ ನಿಜವನ್ನು ಪರಿಶೀಲಿಸು.

. ಭಯಗಳನ್ನು ಎದುರಿಸು

  • Ø  ಭಯವನ್ನು ಎದುರಿಸುವುದು ಆತ್ಮವಿಶ್ವಾಸದ ಬಾಗಿಲು.
  • Ø  ಪ್ರತಿ ಸಣ್ಣ ಹೆಜ್ಜೆ ನಿನ್ನ ಧೈರ್ಯವನ್ನು ಹೆಚ್ಚಿಸುತ್ತದೆ.
  • Ø  ಅಸಹಜ ಪರಿಸ್ಥಿತಿಗಳಲ್ಲಿ ನಿನ್ನ ಶಕ್ತಿಯನ್ನು ಕಂಡುಕೊಳ್ಳುವ ಅವಕಾಶವಿದೆ.

. ನಿನ್ನ ಶಕ್ತಿಯ ಕ್ಷೇತ್ರಗಳಲ್ಲಿ ತೊಡಗಿಕೋ

  • Ø  ನಿನ್ನ ಶಕ್ತಿಗಳನ್ನು ಬಳಸುವಾಗ ನಿನ್ನೊಳಗಿನ ಶ್ರದ್ಧೆ ಬೆಳೆಯುತ್ತದೆ.
  • Ø  ಪ್ರತಿದಿನ ನಿನ್ನ ಸಾಮರ್ಥ್ಯವನ್ನು ಸವಾಲು ಮಾಡು, ಹೊಸ ಗುರಿಗಳನ್ನು ಹೊಂದು.
  • Ø  ನಿನ್ನ ಕೌಶಲ್ಯಗಳು ನಿನ್ನ ಆತ್ಮವಿಶ್ವಾಸಕ್ಕೆ ಆಧಾರವಾಗುತ್ತವೆ.

. “ಇಲ್ಲಎನ್ನುವ ಸಮಯವನ್ನು ಅರಿತುಕೋ

  • Ø  "ಇಲ್ಲ" ಎನ್ನುವುದು ಸ್ವಯಂ ಗೌರವದ ಸಂಕೇತ.
  • Ø  ನಿನ್ನ ಸಮಯ, ಶಕ್ತಿ, ಮತ್ತು ಮೌಲ್ಯಗಳನ್ನು ಕಾಪಾಡಲು ಶಬ್ದವನ್ನು ಧೈರ್ಯದಿಂದ ಬಳಸು.


. ವಾಸ್ತವಿಕ ಗುರಿಗಳನ್ನು ನಿಗದಿ ಪಡಿಸಿಕೊಳ್ಳಿ

  • Ø  ಸಾಧ್ಯವಾದ ಗುರಿಗಳು ನಿನ್ನನ್ನು ಪ್ರೇರೇಪಿಸುತ್ತವೆ, ನಿರಂತರ ಚಟುವಟಿಕೆಗೆ ದಾರಿ ಮಾಡುತ್ತವೆ.
  • ಪ್ರತಿ ಸಾಧನೆಯು ನಿನ್ನ ಆತ್ಮವಿಶ್ವಾಸವನ್ನು ಪುನಃ ದೃಢಪಡಿಸುತ್ತದೆ.
  • Ø  ಅಸಾಧ್ಯ ಗುರಿಗಳನ್ನು ಪುನರ್ಮೌಲ್ಯಮಾಪನ ಮಾಡು, ಅವುಗಳನ್ನು ಹಂತ ಹಂತವಾಗಿ ಸಾಧಿಸಬಹುದಾದ ಗುರಿಗಳಾಗಿ ರೂಪಿಸು.

 

ಆಂಗ್ಲ ಮೂಲ:  Amy Morin, LCSW 

ಸಮ್ಮತತೆಯ (Agreeableness) ವ್ಯಕ್ತಿತ್ವ ಲಕ್ಷಣ

ಮುಖ್ಯ ಅಂಶಗಳು:

·         ಹೆಚ್ಚು ಸಮ್ಮತತೆಯ ಹೊಂದಿರುವವರು ದಯಾಳು, ಸಹಾಯಮಾಡುವವರು ಮತ್ತು ಇತರರ ಬಗ್ಗೆ ಕಾಳಜಿಯುಳ್ಳವರು.

·         ಇವರು ತಮ್ಮ ಅಗತ್ಯಗಳನ್ನು ಸ್ಪಷ್ಟವಾಗಿ ಹೇಳಲು ಅಥವಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುವ ಸಾಧ್ಯತೆ ಇದೆ.

·         ಇತರರೊಂದಿಗೆ ಸಹಕರಿಸುವುದು ಮತ್ತು ಅವರ ಭಾವನೆಗಳನ್ನು ಪರಿಗಣಿಸುವುದರಿಂದ ಲಕ್ಷಣವನ್ನು ಬೆಳೆಸಬಹುದು.

ಸಮ್ಮತತೆ ಎಂದರೇನು? ಇದು ವ್ಯಕ್ತಿಯು ಇತರರೊಂದಿಗೆ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದನ್ನು ಮತ್ತು ಸಾಮಾಜಿಕ ಸಮರಸತೆಯ ಬಗ್ಗೆ ಅವರ ಕಾಳಜಿಯನ್ನು ತೋರಿಸುವ ಪ್ರಮುಖ ವ್ಯಕ್ತಿತ್ವ ಲಕ್ಷಣವಾಗಿದೆ. ಹೆಚ್ಚು ಸಮ್ಮತತೆಯ ಹೊಂದಿರುವವರು ವಿಶ್ವಾಸಾರ್ಹ, ಸಹಾನುಭೂತಿಪೂರ್ಣ, ನಿಷ್ಠಾವಂತ, ವಿನಮ್ರ ಮತ್ತು ಸಹಕಾರಿಯಾಗಿರುತ್ತಾರೆ.

Big Five Traits: ಸಮ್ಮತತೆ "Big Five" ವ್ಯಕ್ತಿತ್ವ ಲಕ್ಷಣಗಳಲ್ಲಿ ಒಂದಾಗಿದೆ. ಇತರ ನಾಲ್ಕು:

·         Openness (ತೆರೆದ ಮನಸ್ಸು)

·         Conscientiousness (ಜವಾಬ್ದಾರಿತ್ವ)

·         Extraversion (ಬಾಹ್ಯತ್ವ)

·         Neuroticism (ಭಾವನಾತ್ಮಕ ಅಸ್ಥಿರತೆ

ಸಮ್ಮತತೆಯ ಲಕ್ಷಣಗಳು:

·         ಎಲ್ಲರೊಂದಿಗೆ ಹೊಂದಿಕೊಳ್ಳುತ್ತಾರೆ

·         ಜನಪ್ರಿಯರಾಗಿರುತ್ತಾರೆ

·         ಸಹಾಯಮಾಡಲು ಇಚ್ಛಿಸುತ್ತಾರೆ

·         ದಯಾಳು ಮತ್ತು ಸಂವೇದನಾಶೀಲರಾಗಿರುತ್ತಾರೆ

·         ಸಂಘರ್ಷವನ್ನು ಕಡಿಮೆ ಮಾಡುತ್ತಾರೆ

·         ತೀರ್ಪು ನೀಡುವುದನ್ನು ತಪ್ಪಿಸುತ್ತಾರೆ

·         ಸಹಕಾರ ಮತ್ತು ಸ್ನೇಹವನ್ನು ಮೆಚ್ಚುತ್ತಾರೆ

·         ಇತರರ ಅಗತ್ಯಗಳನ್ನು ಹೆಚ್ಚು ಎಂದು ತಿಳಿಯುತ್ತಾರೆ  

ಅಪಾಯಗಳು:

·         ತಮ್ಮ ಇಚ್ಛೆಗಳನ್ನು ಸ್ಪಷ್ಟವಾಗಿ ಹೇಳಲು ಕಷ್ಟಪಡುವ ಸಾಧ್ಯತೆ

·         ತಮ್ಮ ವೃತ್ತಿ ಬೆಳವಣಿಗೆ ಬಗ್ಗೆ ಗಮನ ಕಡಿಮೆ

·         ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ಸಾಧ್ಯತೆ 

ಸಮ್ಮತತೆಯ ಉಪ-ಲಕ್ಷಣಗಳು:

·         Altruism (ಪರೋಪಕಾರ)

·         Cooperation (ಸಹಕಾರ)

·         Modesty (ವಿನಮ್ರತೆ)

·         Straightforwardness (ಸಾಧುತನ)

·         Sympathy (ಸಹಾನುಭೂತಿ)

·         Trust (ವಿಶ್ವಾಸ

ಹೆಚ್ಚು ಸಮ್ಮತತೆಯ ಹೊಂದಿರುವವರ ವರ್ತನೆ:

·         ಇತರರ ಹಿತವನ್ನು ತಮ್ಮದಕ್ಕಿಂತ ಹೆಚ್ಚು ಎಂದು ತಿಳಿಯುತ್ತಾರೆ 

·         ಜನರ ಮೆಚ್ಚುಗೆಗಾಗಿ ಪ್ರಯತ್ನಿಸುತ್ತಾರೆ

·         ಸಹಾಯಮಾಡುವ ಚಟುವಟಿಕೆಗಳಲ್ಲಿ ತೊಡಗುತ್ತಾರೆ

·         ಸಂಘರ್ಷ ತಪ್ಪಿಸಲು ತಮ್ಮ ಅಭಿಪ್ರಾಯವನ್ನು ಬದಲಾಯಿಸುತ್ತಾರೆ

·         ನಿಷ್ಠಾವಂತ ಮತ್ತು ಸತ್ಯವಂತರಾಗಿರುತ್ತಾರೆ 

ಹೆಚ್ಚು ಸಮ್ಮತತೆಯ ಬೆಳೆಸಲು:

·         ಲಕ್ಷಣ ಹೊಂದಿರುವ ವ್ಯಕ್ತಿಗಳೊಂದಿಗೆ ಹೆಚ್ಚು ಸಮಯ ಕಳೆಯಿರಿ

·         ತಂಡದಲ್ಲಿ ಕೆಲಸ ಮಾಡಿ

·         ಇತರರ ಭಾವನೆಗಳನ್ನು ಪರಿಗಣಿಸಿ 

ಸಾರಾಂಶ: ಸಮ್ಮತತೆ ವ್ಯಕ್ತಿತ್ವದ ಒಂದು ಭಾಗ ಮಾತ್ರ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಲಕ್ಷಣದ ಕೆಲವು ಮಟ್ಟವಿರುತ್ತದೆ. ವಯಸ್ಸು ಹೆಚ್ಚಾದಂತೆ ಜನರು ಹೆಚ್ಚು ಸಮ್ಮತತೆಯ ವ್ಯಕ್ತಿಗಳಾಗುತ್ತಾರೆ. ಆದರೆ, ಇದು ನಿಮ್ಮ ಸಂಪೂರ್ಣ ವ್ಯಕ್ತಿತ್ವವಲ್ಲಇದು ನಿಮ್ಮ ವ್ಯಕ್ತಿತ್ವದ ಒಂದು ಆಯಾಮ ಮಾತ್ರ.

 

ಆಂಗ್ಲ ಮೂಲ: Sherri Gordon