ಸ್ವಯಂಶಿಸ್ತು ಎಂದರೆ ಹೆಚ್ಚು ಕೆಲಸ ಮಾಡುವುದಲ್ಲ, ವ್ಯವಸ್ಥೆ ಮತ್ತು ದಿನಚರಿಗಳನ್ನು ರೂಪಿಸುವುದು. ನಿರ್ಧಾರಗಳ ಒತ್ತಡವನ್ನು ಕಡಿಮೆ ಮಾಡಿ, ಸ್ಥಿರವಾದ ಅಭ್ಯಾಸಗಳನ್ನು ಬೆಳೆಸಿದರೆ, ಮುಖ್ಯ ಕಾರ್ಯಗಳಿಗೆ ಮನಶಕ್ತಿ ಉಳಿಯುತ್ತದೆ.
ನಿರ್ಧಾರದ ದಣಿವು
·
ಮನೋವಿಜ್ಞಾನಿ
ರಾಯ್ ಬೌಮಿಸ್ಟರ್ (Roy F. Baumeister) ಪರಿಚಯಿಸಿದ ಕಲ್ಪನೆ.
·
ದಿನದಲ್ಲಿ
ಹೆಚ್ಚು ನಿರ್ಧಾರಗಳನ್ನು ತೆಗೆದುಕೊಂಡರೆ,
ಅವುಗಳ ಗುಣಮಟ್ಟ ಕುಸಿಯುತ್ತದೆ.
·
ಆಹಾರ,
ಬಟ್ಟೆ, ಪ್ರಯಾಣದಂತಹ ಸಣ್ಣ ಆಯ್ಕೆಗಳು ಮನಶಕ್ತಿಯನ್ನು
ಹೀರುತ್ತವೆ.
·
ಪರಿಹಾರ:
ಸಣ್ಣ ನಿರ್ಧಾರಗಳನ್ನು ಬಿಟ್ಟು ದಿನಚರಿಯನ್ನು ರೂಪಿಸಿಕೊಳ್ಳಬೇಕು .
ಬೆಳಗಿನ & ಸಂಜೆ ದಿನಚರಿ
·
ದಿನಚರಿ
ದಿನದ ಕೆಲಸ
ಕಾರ್ಯಗಳನ್ನು ಸ್ಥಿರಗೊಳಿಸುತ್ತದೆ, ಅನುಮಾನವನ್ನು ಕಡಿಮೆ ಮಾಡುತ್ತದೆ.
·
ಬೆಳಗಿನ
ದಿನಚರಿ ಹೆಚ್ಚು ಶಕ್ತಿ ತುಂಬಿ ಉತ್ಪಾದಕತೆಗೆ ಸಿದ್ಧಗೊಳಿಸುತ್ತದೆ.
·
ಸಂಜೆಯ
ದಿನಚರಿ ಚಿಂತನೆ, ವಿಶ್ರಾಂತಿ, ನಾಳೆಯ ಸಿದ್ಧತೆಗೆ ಅನುವುಮಾಡಿಕೊಡುತ್ತದೆ.
·
ದಿನಚರಿ ಸರಳವಾಗಿರಲಿ (3–5 ಕಾರ್ಯಗಳು, 10–30 ನಿಮಿಷ).
·
30–60 ದಿನಗಳ
ನಿರಂತರತೆ ನಿಮ್ಮ ಅಭ್ಯಾಸವನ್ನು ಶಾಶ್ವತಗೊಳಿಸುತ್ತದೆ.
ಮುಖ್ಯ ಅಭ್ಯಾಸಗಳು
- ಪ್ರತಿದಿನ ಒಂದೇ ಸಮಯಕ್ಕೆ ಹಾಸಿಗೆಯಿಂದ ಏಳಿ
·
ಶಿಸ್ತು
ಎಂದರೆ ನಿರಂತರತೆ, ಬೇಗ ಏಳುವುದಲ್ಲ.
·
ನಿಮ್ಮ
ಜೀವನಶೈಲಿಗೆ ಹೊಂದುವ ಸಮಯವನ್ನು ಆರಿಸಿ, ಅದನ್ನು ಪಾಲಿಸಿ.
- ದಿನಚರಿ (ಜರ್ನಲ್) ಬರೆಯಿರಿ
·
ಬರವಣಿಗೆ
ಚಿಂತನೆಗಳನ್ನು ಸ್ಪಷ್ಟಗೊಳಿಸುತ್ತದೆ, ಪ್ರಗತಿಯನ್ನು ದಾಖಲಿಸುತ್ತದೆ.
·
ರಚನೆಯುತ
(ಪ್ರಶ್ನೆಗಳು, ಕೃತಜ್ಞತೆ) ಅಥವಾ ಮುಕ್ತ “ಬ್ರೇನ್
ಡಂಪ್” ಆಗಿರಬಹುದು.
·
ಮುಖ್ಯ
ವಿಷಯಗಳನ್ನು ಅಪ್ರಮುಖ ವಿಷಯಗಳಿಂದ ಬೇರ್ಪಡಿಸಲು
ಸಹಾಯ ಮಾಡುತ್ತದೆ.
ಮಾದರಿ ದಿನಚರಿ
ಬೆಳಗಿನ
ದಿನಚರಿ
·
ನಿಗದಿತ
ಸಮಯಕ್ಕೆ ಹಾಸಿಗೆಯಿಂದ ಏಳಿ
·
ನೀರು
ಕುಡಿಯಿರಿ
·
ಸ್ನಾನ/ಲಘು ವ್ಯಾಯಾಮ
·
ಉಸಿರಾಟ
ಅಭ್ಯಾಸ
·
ಜರ್ನಲ್
ಬರೆಯಿರಿ
ಸಂಜೆಯ
ದಿನಚರಿ
·
ಕೆಲಸದ
ಸ್ಥಳ/ಮನೆ ಸ್ವಚ್ಛ ಮಾಡಿ
·
ನಾಳೆಯ
ಕಾರ್ಯಗಳನ್ನು ಯೋಜಿಸಿ
·
ಬಟ್ಟೆ
ಸಿದ್ಧಪಡಿಸಿ
·
ಪುಸ್ತಕದ
ಕೆಲವು ಪುಟಗಳನ್ನು
ಓದಿ
·
ಯೋಗ/ವ್ಯಾಯಾಮ/ಧ್ಯಾನ ಮಾಡಿ
ಮಾರ್ಗಸೂಚಿ ತತ್ವಗಳು
·
ಸರಳತೆ:
ಕಡಿಮೆ ಕಾರ್ಯಗಳು = ಹೆಚ್ಚಿನ ಯಶಸ್ಸು.
·
ನಿರಂತರತೆ:
ದಿನಚರಿ ಪ್ರತಿದಿನ ಪಾಲಿಸಬೇಕು.
·
ಹೊಂದಿಕೊಳ್ಳುವಿಕೆ:
ನಿಮ್ಮ ಜೀವನಶೈಲಿಗೆ ತಕ್ಕಂತೆ ರೂಪಿಸಿಕೊಳ್ಳಿ.
·
ವ್ಯವಸ್ಥೆ
(System) ಗಳು ಗುರಿಗಿಂತ
ಮುಖ್ಯ: Atomic
Habits ಪುಸ್ತಕದಲ್ಲಿ
ಜೇಮ್ಸ್ ಕ್ಲಿಯರ್ ಹೇಳುವಂತೆ — “ನೀವು ಗುರಿಗಳ ಮಟ್ಟಕ್ಕೆ
ಏರುವುದಿಲ್ಲ. ನೀವು ನಿಮ್ಮ ಸಿಸ್ಟಮ್ಗಳ ಮಟ್ಟಕ್ಕೆ ಬೀಳುತ್ತೀರಿ.”
ಕೊನೆಯ ಮಾತು:
ಶಿಸ್ತು ಎಂದರೆ ಸಣ್ಣ, ನಿರಂತರ ದಿನಚರಿಗಳ ಮೂಲಕ ಕ್ಷುಲ್ಲಕ (trivial) ನಿರ್ಧಾರಗಳನ್ನು ತೆಗೆದು ಹಾಕುವುದು, ಮುಖ್ಯ ಕಾರ್ಯಗಳಿಗೆ ಮನಶಕ್ತಿ ಉಳಿಸಿಕೊಳ್ಳುವುದು. ಬೆಳಗಿನ ಮತ್ತು ಸಂಜೆ ದಿನಚರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಸ್ಥಿರತೆ, ಕಡಿಮೆ ಒತ್ತಡ, ಮತ್ತು ಉತ್ಪಾದಕತೆ ಜೀವನದ ಭಾಗವಾಗುತ್ತದೆ.
ಮೂಲ: Phil Janecic’s article, Mind of Steel
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ