ಮಂಗಳವಾರ, ಅಕ್ಟೋಬರ್ 27, 2020

ಈಗ ನೋವನ್ನು ಅನುಭವಿಸಿ ಹಾಗು ಮುಂದಿನ ದಿನಗಳಲ್ಲಿ ವಿಜಯದ ಸುಖವನ್ನು ನಿಮ್ಮದಾಗಿಸಿಕೊಳ್ಳಿ

 ವೃತ್ತಿಜೀವನದ ಯಶಸ್ಸಿನ ಪ್ರಯಾಣವು ಕೊನೆಯವರೆಗೂ ಕಠಿಣವಾಗಿರುತ್ತದೆ. ಯಶಸ್ಸಿನ ಹಾದಿಯಲ್ಲಿ ಹಲವು ಏರಿಳಿತಗಳು ಇದ್ದೇ ಇರುತ್ತವೆ. ಪ್ರಯಾಣದ ಸಮಯದಲ್ಲಿ, ಜೀವನವು ರೋಲರ್ ಕೋಸ್ಟರ್ ಸವಾರಿಯನ್ನು ಹೋಲುತ್ತದೆ. ಆದರೆ, ನೆನಪಿಡಿ ಹೋಗುವುದು ಕಠಿಣವಾದಾಗ, ಅದೂ ಮತ್ತೂ ಕಠಿಣವಾಗುತ್ತಾ ಹೋಗುತ್ತದೆ. ಪ್ರಖ್ಯಾತ ಬಾಕ್ಸರ್ ಮುಹಮ್ಮದ್ ಅಲಿ ಅವರನ್ನು ನೆನಪಿಸಿಕೊಳ್ಳಿ, ಅವನಿಗೆ ರಾತ್ರೋರಾತ್ರಿ ಯಶಸ್ಸು ಸಿಗಲಿಲ್ಲ. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ದೀರ್ಘಕಾಲದವರೆಗೆ ಕಠಿಣ ಶ್ರಮ ಪಟ್ಟರು. ಅವರ ಯಶಸ್ಸಿನ ರಹಸ್ಯವು ದೈಹಿಕ ಮತ್ತು ಮಾನಸಿಕ ಆರೋಗ್ಯ ತರಬೇತಿಯ ಸಂಯೋಜನೆಯಾಗಿದೆ ಎಂದು ಅವರು ಜನರಿಗೆ ಹೇಳುತ್ತಿದ್ದರು. ಅವರ ಉದ್ರಿಕ್ತ ಮತ್ತು ಪ್ರಯಾಸಕರ ತರಬೇತಿಯ ಅವಧಿಯಲ್ಲಿ, ತಮ್ಮನ್ನು ತಾವು ತೊಡಗಿಸಿಕೊಂಡರು ಮತ್ತು ಅದಕ್ಕೆ ಬದ್ಧರಾಗಿದ್ದರು:” ಈಗ ನೋವನ್ನು ನುಂಗಿಕೊಳ್ಳಿ ಹಾಗು ಮುಂದಿನ ದಿನಗಳಲ್ಲಿ ವಿಜಯದ ಸುಖವನ್ನು ಅನುಭವಿಸಿ.” ಅವರ ಉದಾಹರಣೆಯನ್ನು ನೀವು ಅನುಕರಿಸಲು ಯೋಗ್ಯವಾಗಿದೆ. ಈಗಲೇ ನಿಮಗೂ ಸರಿಯಾದ ಸಮಯ, ಕಠಿಣ ಮತ್ತು  ದೀರ್ಘಕಾಲದವರೆಗೆ ತರಭೇತಿಯಿಂದ ತಯಾರಿಮಾಡಿಕೊಳ್ಳಲು ಹಾಗೂ ವೃತ್ತಿ ಜೀವನದಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಲು. ಮನಸ್ಸು, ದೇಹ ಹಾಗೂ ಆತ್ಮದ ಸಮತೋಲನವನ್ನು ಕಾಯ್ದುಕೊಳ್ಳಲು ಇದೆ ಸರಿಯಾದ ಸಮಯವಾಗಿದೆ.

ಆರೋಗ್ಯಕರ ದೇಹವು ಆರೋಗ್ಯಕರ ಮನಸ್ಸಿನ ವಾಸಸ್ಥಾನವಾಗಿದೆ, ಇದು ಪರೀಕ್ಷೆಯ ಯಶಸ್ವಿ ತಯಾರಿಕೆಗೆ ಅವಶ್ಯಕವಾಗಿದೆ. ಮುಹಮ್ಮದ್ ಅಲಿಯಂತೆ ನಿಮಗೆ ಆರೋಗ್ಯಕರ ಆಹಾರವೂ ಬೇಕು. ಜಂಕ್ ಫುಡ್ ನಿಮ್ಮ ಮಾನಸಿಕ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತದೆ. ಇದು ನಿಮ್ಮ ಅಮೂಲ್ಯವಾದ ಸಿದ್ಧತೆ ಮತ್ತು ಅಧ್ಯಯನದ ಸಮಯ ಮತ್ತು ನೀವು ಪರೀಕ್ಷೆಗಳಿಗೆ ಹಾಜರಾದಾಗ ಅಮೂಲ್ಯವಾದ ಉತ್ತರ ಬರೆಯುವ ಸಮಯವನ್ನು ವ್ಯರ್ಥ ಮಾಡುತ್ತದೆ. ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ದೇಹದ ಸಮಯ-ಪರೀಕ್ಷಿತ ಪ್ರಯೋಜನಗಳು ಕೋವಿಡ್ -19 ಸಾಂಕ್ರಾಮಿಕದ ಪ್ರಸ್ತುತ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗಿವೆ.

 ನೀವು ತಯಾರಿ ಸಮಯದಲ್ಲಿ ಮತ್ತು ಪರೀಕ್ಷೆಯನ್ನು ಬರೆಯುತ್ತಿರುವಾಗ ನಿಮ್ಮ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನ ನೀಡಲು ನೀವು ಸಾಕಷ್ಟು ವಿಶ್ರಾಂತಿ ಪಡೆದಿರಬೇಕು. ನೀವು ಚೆನ್ನಾಗಿ ನಿದ್ರಿಸಿ. ಪ್ರತಿ 24 ಗಂಟೆಗಳ ಚಕ್ರದಲ್ಲಿ ಎಂಟರಿಂದ ಒಂಬತ್ತು ಗಂಟೆಗಳ ನಿದ್ರೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಎಲ್ಲಾ ಜೀವಿಗಳಂತೆ, ಮಾನವನೂ ದೇಹಗಳು ಸಹ ಪ್ರಕೃತಿದತ್ತ ಲಯವನ್ನು ಅನುಸರಿಸಲೇಬೇಕು. ನಾವು ಸೂರ್ಯನ ಆರಂಭಿಕ ಕಿರಣಗಳೊಂದಿಗೆ ಅಥವಾ ಮುಂಜಾನೆ ಪೂರ್ವದಲ್ಲಿ ಎಚ್ಚರಗೊಳ್ಳುತ್ತೇವೆ ಮತ್ತು ರಾತ್ರಿಯಾಗುತ್ತಿದ್ದಂತೆ ವಿಶ್ರಾಂತಿಯ ಅವಶ್ಯಕತೆಯಿದೆ ಎಂದು ನಾವು ಭಾವಿಸುತ್ತೇವೆ. ನಿಮಗೆ ಆಯಾಸವೆನಿಸಿದಾಗ ನೀವು ವಿಶ್ರಾಂತಿ ಪಡೆಯಬೇಕು. ನಿಮಗೆ ನಿದ್ದೆ ಮಾಡಬೇಕೆನಿಸಿದಾಗ ಬಲವಂತವಾಗಿ ನಿದ್ದೆಯನ್ನು ಮುಂದೂಡುವುದು ಆರೋಗ್ಯಕರವಲ್ಲ ಹಾಗು ಅದರಿಂದ ಸಮಯ ವ್ಯಯವಾಗುತ್ತದೆ.

 ನಿಮ್ಮ ನೆನಪಿನಲ್ಲಿರಲಿ ಮಾನವ "ಸಂಗಜೀವಿ" ಎಂದು. ನಿಮ್ಮ ಪರೀಕ್ಷೆಯ ತಯಾರಿಗೆ ಗಮನಹರಿಸಲು ನೀವು ನಿಮ್ಮನ್ನು ಪ್ರತ್ಯೇಕ ವ್ಯಕ್ತಿಯನ್ನಾಗಿ ಪರಿವರ್ತಿಸಿದರೆ, ಅದು ನಿಮ್ಮ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ನಿಮ್ಮ ತಯಾರಿ ವೇಳಾಪಟ್ಟಿ ಎಷ್ಟೇ ಕಾರ್ಯನಿರತವಾಗಿದ್ದರೂ ನಿಮ್ಮ ಪೋಷಕರು, ಒಡಹುಟ್ಟಿದವರು, ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಸಮಯವನ್ನು ಮೀಸಲಿಡುವಂತೆ ನೋಡಿಕೊಳ್ಳಿ. ನಿಮ್ಮ ಹಿತೈಷಿಗಳೊಂದಿಗೆ ಸಮಯ ಕಳೆಯುವುದು ಪ್ರಯಾಸದಾಯಕ ಅಧ್ಯಯನ ವೇಳಾಪಟ್ಟಿಗಳ ಮಧ್ಯದಲ್ಲಿ ನಿಮಗೆ ಅಗತ್ಯ ಮತ್ತು ಸ್ವಾಗತಾರ್ಹ ವಿರಾಮಗಳನ್ನು ಒದಗಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೇಗೆ ಯಶಸ್ವಿಯಾಗಬಹುದು ಎಂಬುದರ ಕುರಿತು ಜನರು ನಿಮಗೆ ಸಲಹೆಗಳು ಮತ್ತು ಮಾರ್ಗದರ್ಶನ ನೀಡುತ್ತಾರೆ. ಮಾನವನ ಮೆದುಳು ಎರಡು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ವಿರಾಮವಿಲ್ಲದೆ ಅಧ್ಯಯನಗಳ ಮೇಲೆ ಹೆಚ್ಚು ಗಮನ ಹರಿಸಲಾರದು. ಎರಡು ಮೂರು ಗಂಟೆಗಳ ಕಾಲ ತೀವ್ರವಾಗಿ ಅಧ್ಯಯನ ಮಾಡಿದ ನಂತರ ಮೆದುಳಿಗೆ 10 ರಿಂದ 15 ನಿಮಿಷಗಳ ವಿರಾಮ ಬೇಕಾಗುತ್ತದೆ. ವಿರಾಮವಿಲ್ಲದೆ ಐದರಿಂದ ಆರು ಗಂಟೆಗಳ ಕಾಲ ಅಧ್ಯಯನ ಮಾಡಲು ನೀವೇ ಮುಂದಾಗಿದ್ದರೆ, ಎರಡು ಅಥವಾ ಮೂರು ಗಂಟೆಗಳು ಕಳೆದ ನಂತರ ನಿಮ್ಮ ಸಾಮರ್ಥ್ಯ ಕಡಿಮೆಯಾಗುವುದು (law of Diminishing Returns). ತೀವ್ರವಾದ ಅಧ್ಯಯನದ ಮೊದಲ ಎರಡು ಅಥವಾ ಮೂರು ಗಂಟೆಗಳ ನಂತರ ಕಲಿಕೆಯ ಜಾಗರೂಕತೆ ಮತ್ತು ಧಾರಣಶಕ್ತಿಯು ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ, ಪ್ರತಿದಿನ ನಿಮ್ಮ ಸಾಮಾಜಿಕ ಸಂವಹನಗಳ ಸಂಖ್ಯೆಯನ್ನು ಮಿತಿಗೊಳಿಸುವುದು ಸಹ ಮುಖ್ಯವಾಗಿದೆ ಇದರಿಂದ ಅವುಗಳು ವಿಚಲಿತತೆಯ ಮೂಲವಾಗುವುದಿಲ್ಲ. ಸಾಮಾಜಿಕ ಸಂವಹನಗಳಿಂದ ಸಮಯ ವ್ಯರ್ಥವಾಗಬಾರದು. ಇವುಗಳು ನಿಮ್ಮ ಅಧ್ಯಯನದ ಸಮಯವನ್ನು ತಿನ್ನಬಾರದು. ನಿಮ್ಮ ಅಧ್ಯಯನದ ವಿರಾಮಗಳಿಗೆ ವೈವಿಧ್ಯತೆಯನ್ನು ಸೇರಿಸಲು ದಯವಿಟ್ಟು ನಿಮ್ಮ ಮನಸ್ಸನ್ನು ಚೈತನ್ಯ (ರಿಫ್ರೆಶ್) ಮಾಡುವ ಸಾಮಾನ್ಯ ಓದುವಿಕೆ ಅಥವಾ ಸಂಗೀತದಂತಹ ಯಾವುದನ್ನಾದರೂ ನಿಯಂತ್ರಿತ ಮತ್ತು ಸಮತೋಲಿತ ರೀತಿಯಲ್ಲಿ ಬಳಸಿ.

 ನೀವು ಸಕಾರಾತ್ಮಕವಾಗಿರಬೇಕು ಮತ್ತು ಎಲ್ಲಾ ಸಮಯದಲ್ಲೂ ನಿಮ್ಮ ಸುತ್ತ ಸಕಾರಾತ್ಮಕ ಪ್ರಭಾವವಿರುವಂತೆ ನೋಡಿಕೊಳ್ಳಿ. ಯಾವುದೇ ಸಮಯದಲ್ಲಿ ನಿಮ್ಮ ಚೈತನ್ಯ ಕಡಿಮೆಯಾಗಿದೆ ಎನಿಸಿದಾಗ, ನಿಮ್ಮ ನಕಾರಾತ್ಮಕ ಚಿಂತನೆಯ ಮಾದರಿಗಳನ್ನು ಪರಿಶೀಲಿಸುವುದು ಮತ್ತು ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಬದಲಾಯಿಸುವುದು ಮುಖ್ಯ. ನರ ಮಾರ್ಗಗಳನ್ನು ಉದ್ಯಾನದ ಮಾರ್ಗಗಳೆಂದು ಯೋಚಿಸಿ. ನೀವು ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳುವ ಹಾದಿಗಳು ಉತ್ತಮವಾಗಿ ವ್ಯಾಖ್ಯಾನಿಸಲ್ಪಡುತ್ತವೆ ಮತ್ತು ನೀವು ತೋಟದಲ್ಲಿ ತ್ಯಜಿಸುವ ಮಾರ್ಗಗಳು ಕಾಲಾನಂತರದಲ್ಲಿ ಸ್ವಯಂಚಾಲಿತವಾಗಿ ಹಸಿರಿನಿಂದ ಕೂಡುತ್ತವೆ ಮತ್ತು ಹಾದಿ ಕಣ್ಮರೆಯಾಗುತ್ತವೆ. ಇದು ನಿಮ್ಮ ಮೆದುಳಿನಲ್ಲೂ ಅದೇ ರೀತಿ ಆಗುತ್ತದೆ. ಪ್ರಜ್ಞಾಪೂರ್ವಕವಾಗಿ ಮತ್ತು ಪದೇ ಪದೇ ಬಲಪಡಿಸುವ ಚಿಂತನೆಯ ಮಾದರಿಗಳು ನಿಮ್ಮ ಮೆದುಳಿನಲ್ಲಿ ಪ್ರಾಬಲ್ಯ ಸಾಧಿಸುತ್ತವೆ ಮತ್ತು ಮೂಲಕ ನಿಮ್ಮ ವ್ಯಕ್ತಿತ್ವವನ್ನು ಬಲಬಡಿಸುತ್ತವೆ.

 ನಿಮ್ಮ ವೃತ್ತಿಜೀವನದ ಪ್ರಯಾಣದಲ್ಲಿ ನೀವು ಮುಂದುವರಿಯುತ್ತಿರುವಾಗ ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರಲೆಂದು ಬಯಸುತ್ತೇನೆ!

 

ನಿಮ್ಮ ವಿಶ್ವಾಸಿ

ಸುರೇಂದ್ರ ಕುಮಾರ್ ಸಚ್ದೇವ

ಕನ್ನಡಕ್ಕೆ: ನಾಗೇಂದ್ರ ಕುಮಾರ್ ಕೆ. ಎಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ