ಏಪ್ರಿಲ್ ೧, ೨೦೧೩ ರಿಂದ ಹಳೆಯ ಚೆಕ್ ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಹೊಸ ವರ್ಷದಿಂದ ಬ್ಯಾಂಕ್ ವ್ಯವಹಾರವು ಹೊಸ ಚೆಕ್ ಮಾದರಿಯಲ್ಲಿ ನಡೆಯುತ್ತದೆ. ಚೆಕ್ ಟ್ರಂಕೇಷನ್ ಸಿಸ್ಟಂ ಅಥವಾ CTS 2010 ಎಂದು ಕರೆಯಲ್ಪಡುವ ಈ ಹೊಸ ಮಾದರಿ ಚೆಕ್ ವ್ಯವಹಾರವನ್ನು ಎಲ್ಲಾ ಬ್ಯಾಂಕ್ ಗಳು ಪಾಲಿಸಲಿವೆ.
ಮುಖ್ಯವಾದ ಬದಲಾವಣೆಗಳು ನಿಮಗೆ ತಿಳಿದಿರಲಿ.
೧. IFSC (Indian Financial System Code-ಭಾರತೀಯ ಹಣಕಾಸು ವ್ಯವಸ್ಥೆ ತಂತ್ರಲಿಪಿ -) ಹಾಗು MICR ( Magnetic Ink Character Recognition-ಆಯಸ್ಕಾಂತ ಶಾಯಿ ಅಕ್ಷರ ಗುರುತಿಸುವಿಕೆ) ಗಳು ಎಲ್ಲಾ ಚೆಕ್ ಗಳ ಮೇಲಿರುವುದು ಕಡ್ಡಾಯ.
೨.ಎಲ್ಲಾ ಚೆಕ್ ಗಳು Standardised Water mark ನ್ನು ಹೊಂದಿರಲಿದೆ. ಚಕ್ಕನ್ನು ಬೆಳಕಿಗೆ ಹಿಡಿದಾಗ CTS-India ಎನ್ನುವ water mark ಕಾಣುತ್ತದೆ.
೩. ಹೊಸ ಚೆಕ್ ನಲ್ಲಿ ಯಾವುದೇ ಬದಲಾವಣೆ,ತಿದ್ದುಪಡಿ ಮಾಡುವಂತಿಲ್ಲ. ತಿದ್ದುಪಡಿಗಳಿದ್ದರೆ ಹೊಸ ಚೆಕ್ಕನ್ನೇ ಬಳಸಬೇಕು..
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ :o)
ಪ್ರತ್ಯುತ್ತರಅಳಿಸಿಪ್ರಶಾಂತ್ ನಿಮಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ