
ಈ ದೀಪಾವಳಿಗೆ ಪಟಾಕಿ,ಮತಾಪುಗಳನ್ನು ಬಳಸುವಾಗ ಕೆಳಗಿನ ಸಲಹೆಗಳನ್ನು ಅನುಸರಿಸಿ ಸಂತೋಷ ಇಮ್ಮಡಿಗೊಳಿಸಿಕೊಳ್ಳಬಹುದು.
ಪಟಾಕಿಗಳನ್ನು ಸಿಡಿಸಲು ಮೈದಾನವನ್ನು ಆರಿಸಿಕೊಳ್ಳಿ.
ತುಂಬಾ ಶಬ್ದ ಹಾಗು ವಾಯುಮಾಲಿನ್ಯಗೊಳಿಸುವ ಸಿಡಿಮದ್ದುಗಳ ಬಳಸುವುದನ್ನು ಕಡಿಮೆಮಾಡಿ.
ಉದ್ದದ ಕಡ್ಡಿಗಳನ್ನು ಬಳಸಿ ಪಟಾಕಿ,ಮತಾಪುಗಳನ್ನು ಹೊತ್ತಿಸಿ.
ಪಟಾಕಿಗಳನ್ನು ಸ್ವಚ್ಛ ಹಾಗು ತಣ್ಣನೆಯ ಜಾಗದಲ್ಲಿ ಶೇಖರಿಸಿಡಿ.
ಚಿಕ್ಕ ಮಕ್ಕಳ ಕೈಗೆ ಪಟಾಕಿ,ಮತಾಪುಗಳು ಸಿಗದಂತೆ ಎಚ್ಚರವಹಿಸಿ.
ಹೂವಿನ ಕುಂಡಗಳಿಂದಲೇ ಹೆಚ್ಚಾಗಿ ಅಪಘಾತಗಳು ಸಂಭವಸಾಧ್ಯತೆ ಇರುವುದರಿಂದ ಮಕ್ಕಳ ಅವುಗಳನ್ನು ಬಳಸುವಾಗ ದೊಡ್ಡವರು ಮಕ್ಕಳ ನೆರವಿಗೆ ಬರುವುದು ಒಳಿತು.
ಪಟಾಕಿಗಳನ್ನು ಹೊತ್ತಿಸಿದ ನಂತರ ಹಲವು ಬಾರಿ ಅವು ಸಿಡಿಯಲು ಸಮಯ ತೆಗೆದುಕೊಳ್ಳುತ್ತದೆ ಅವು ಸಿಡಿಯುವ ಮೊದಲೇ ಮಕ್ಕಳು ಅದನ್ನು ಕೈಯಲ್ಲಿ ಹಿಡಿಯುವ ಆತುರ ತೋರುತ್ತಾರೆ ಅಂತಹ ಸಂದರ್ಭಗಳಲ್ಲಿಯೇ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ.
ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಕೊಡಿ.
ಶಾಲಾ-ಕಾಲೇಜುಗಳಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು.
ಮನೆಯ ಒಳಗೆ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.ಶುದ್ಧ ಗಾಳಿಯು ಸಿಗದೆ ಉಸಿರಾಟದ ತೊಂದರೆಯುಂಟಾಗಬಹುದು.
ಪಟಾಕಿ,ಮತಾಪುಗಳನ್ನು ಸಿಡಿಸುವ ವೇಳೆಯಲ್ಲಿ ಚಪ್ಪಲಿ ಧರಿಸುವ ಬದಲು ಶೂಗಳನ್ನು ಧರಿಸುವುದು ಒಳ್ಳೆಯದು.
ಮಕ್ಕಳು ಹುಡುಕಾಟಕ್ಕಾಗಿ ಕೈಯಲ್ಲೇ ಪಟಾಕಿ,ಮತಾಪುಗಳನ್ನು ಸಿಡಿಸುವುದನ್ನು ಧೈರ್ಯ ಹಾಗು ಪ್ರತಿಷ್ಟೆಯೆಂದು ಭಾವಿಸಿರುತ್ತಾರೆ. ಅವರಿಗೆ ತಿಳುವಳಿಕೆ ಕೊಟ್ಟು ನಡುವಳಿಕೆಯನ್ನು ತಿದ್ದುವುದರಿಂದ ಅಪಘಾತಗಳನ್ನು ತಡೆಯಬಹುದು.
ಪಟಾಕಿ ಸಿಡಿಸುವಾಗ ನಾವು ಧರಿಸುವ ಉಡುಪುಗಳನ್ನು ಜೋಪಾನವಾಗಿ ಆಯ್ಕೆಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಅಡಗಿದೆ. ಸೀರೆ,ದೊಗಲೆ ಉಡುಪುಗಳನ್ನು ಧರಿಸಿ ಪಟಾಕಿ,ಮತಾಪುಗಳನ್ನು ಸಿಡಿಸಬೇಡಿ.
ಬೆಂಕಿಯಿಂದ ಗಾಯಗಳು ಸಂಭವಿಸಿದಲ್ಲಿ ಹರಿಯುವ ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ ನಂತರ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವುದು ಉಚಿತ.
ಅಪಘಾತವೆನಾದರೂ ಸಂಭವಿಸಿದಲ್ಲಿ ಗಾಬರಿಗೊಳ್ಳದೆ ತಾಳ್ಮೆಯಿಂದ ವರ್ತಿಸಿ.
ರೋಗಿಗಳ,ಮಕ್ಕಳ,ವಯೋವೃದ್ಧರನ್ನು ಶಬ್ದ ಹಾಗೂ ವಾಯುಮಾಲಿನ್ಯದಿಂದ ದೂರವಿರಿಸಿ.
ಒಟ್ಟಾರೆ ಹಬ್ಬಗಳು ಸಂತಸವನ್ನು ಇಮ್ಮಡಿಗೊಳಿಸಬೇಕಾದರೆ ಅಪಘಾತಗಳು ಸಂಭವಿಸದಂತೆ ಮುಂಜಾಗರೂಕತೆಯಿಂದ ಅವುಗಳನ್ನು ತಡೆಗಟ್ಟುವುದೇ ಆಗಿದೆ.
ಎಲ್ಲರಿಗೂ ಸಂತಸ ಹಾಗು ಸುರಕ್ಷಿತ ದೀಪಾವಳಿಯ ಶುಭಾಷಯಗಳು.
Happay & Safe Deepavali.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಾಗೇಂದ್ರ ಅವರೆ, ಉತ್ತಮ ಲೇಖನ ಮತ್ತು ಅತ್ಯಂತ ಸಮಯೋಚಿತ ಪ್ರಕಟಣೆ. ಈ ರೀತಿಯ ಸಾಮಾಜಿಕ ಕಳಕಳಿ ಎಲ್ಲರಲ್ಲೂ ಬರುವ ಅಗತ್ಯವಿದೆ.
ಪ್ರತ್ಯುತ್ತರಅಳಿಸಿನಿಮಗೆ ಮತ್ತು ನಿಮ್ಮ ಮನೆಯವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು :o)
ಪ್ರಶಾಂತ್ ಧನ್ಯವಾದಗಳು. ನಿಮಗೂ ನಿಮ್ಮ ಕುಟುಂಬದ ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.
ಪ್ರತ್ಯುತ್ತರಅಳಿಸಿ