ನಿನ್ನೆ ನಮ್ಮ ರಾಜ್ಯದ, ದೇಶದ ಅತ್ಯುತ್ತಮ ಇಂಜನಿಯರ್ ಆದ ಶ್ರೀಯುತ ಸರ್. ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನ. ಕರ್ನಾಟದ ಜನತೆಯ ಹೆಮ್ಮೆ ಅಂದರೆ ವಿಶ್ವೇಶ್ವರಯ್ಯ ನವರು. ಅವರ ಜೀವಿತಾವಧಿಯಲ್ಲಿ ಮಾಡಿದಂತಹ ಅನೇಕ ಕೆಲಸ ಕಾರ್ಯಗಳು ಇಂದು ನಮ್ಮ ತಲೆಮಾರಿನ ಯಾರೂ ಕೂಡ ಅಂತಹ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ಮನುಷ್ಯನಿಂದ ಇಷ್ಟೇಲ್ಲಾ ಮಾಡಲು ಸಾಧ್ಯವೇ ಅನ್ನುವ ಹಾಗೆ ಮಾಡಿ ತೋರಿಸಿದ ಮಹಾನ್ ಕಾಯಕಯೋಗಿ,ಯಂತ್ರ ಋಷಿ ನಮ್ಮ ವಿಶ್ವೇಶ್ವರಯ್ಯನವರು.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತನ್ನು ಅಕ್ಷರಶಹ ಮಾಡಿತೋರಿಸಿದ ಸಾಧಕ ನಮ್ಮ ವಿಶ್ವೇಶ್ವರಯ್ಯ.
ಅಂತಹವರ ಬಗ್ಗೆಯೂ ಕೂಡ ಇಲ್ಲಸಲ್ಲದ ಆರೋಪಗಳನ್ನು, ಅವರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಕೆಲಸವನ್ನು ಕೆಲವು ಲದ್ದಿಜೀವಿಗಳು ಮಾಡಲು ಹೊರಟಿರುವುದು ಶೋಚನೀಯ. ಅಂತಹವರನು ವೈಚಾರಿಕ ಭಯೋತ್ಪಾದಕರೆನ್ನದೆ ಇನ್ನೇನೆನ್ನಲು ಸಾಧ್ಯವಿಲ್ಲ. ತಮ್ಮ ನಾಲಗೆಯಿಂದ ತಮ್ಮ ಯೋಗ್ಯತೆ ಏನು ಎಂದು ಕನ್ನಡದ ಜನತೆಗೆ ತೋರಿಸಿದ್ದಾರೆ. ಕೆಲಸ ಮಾಡಲು , ಅಂತಹ ವ್ಯಕ್ತಿಯ ಬಗ್ಗೆ ಮಾತನಾಡಲೂ ಯೋಗ್ಯತೆ ಇಲ್ಲದವರೂ ಕಾಲೆಳೆಯುವುದನ್ನು ಬಿಟ್ಟು ಇನ್ನೇನನ್ನೋ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ?
ಅದು ಏನೇ ಇರಲಿ ತಮ್ಮ ತೆವಲನ್ನು ತೀರಿಸಿಕೊಳ್ಳಲಿ ಬಿಡಿ. ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ?
ವಿಶ್ವೇಶ್ವರಯ್ಯನವರ ಬಗ್ಗೆ ಇಂದಾದರೂ ಸ್ವಲ್ಪ ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ ಇದು ಅಷ್ಟೇ!.
ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಾಚಲಮ್ಮ'. ವಿಶ್ವೇಶ್ವರಯ್ಯನವರು ಜನಿಸಿದ್ದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ವಿಶ್ವೇಶ್ವರಯ್ಯನವರ ಸಾಧನೆಗಳು:
೧. ಕನ್ನಂಬಾಡಿ ಕಟ್ಟೆ ನಿರ್ಮಾತೃ
೨ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಈಗ HAL
೩. ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ
೪.ಸರಕಾರಿ ಸಾಬೂನು ಕಾರ್ಖಾನೆ
೫.ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
೬.ಕನ್ನಡ ಸಾಹಿತ್ಯ ಪರಿಷತ್,
೭. ಮೈಸೂರು ವಿಶ್ವವಿದ್ಯಾನಿಲಯ
೮ ಶಿವನ ಸಮುದ್ರ ಹಾಗು ಜೋಗ್ ಜಲ ವಿದ್ಯುತ್ ಯೋಜನೆ
೯ ಬ್ಲಾಕ್ ಸಿಸ್ಟಮ್ ನೀರಾವರಿ ಯೋಜನೆ
೧೦. ಪ್ಯಾರಾ ಸಿಟಾಯ್ಡ್ ಲ್ಯಾಬೋರೇಟರಿ
೧೧. ಮೈಸೂರು ಸಕ್ಕರೆ ಕಾರ್ಖಾನೆ
೧೨. ಮೈಸೂರು ಸ್ಯಾಂಡಲ್ ಸೋಪು
೧೩. ಭಟ್ಕಳ ಬಂದರು
೧೪. ಶ್ರೀಗಂಧ ಎಣ್ಣೆ ತಯಾರಿಕೆ
೧೫. ಹಿಂದೂ ಮಾರ್ಡನ್ ಹೋಟಲ್
೧೬. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ
೧೭.ಬೆಂಗಳೂರು ವಿಶ್ವವಿದ್ಯಾನಿಲಯ
೧೮. ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ
೧೯. ಸೆಂಚುರಿ ಕ್ಲಬ್
೨೦. ಪೂನಾ ಡೆಕ್ಕನ್ ಕ್ಲಬ್
೨೧. ಹೆಬ್ಬಾಳದ ಗಾಂಧಿ ಕೃಷಿ ವಿಶ್ವವಿದ್ಯಾಲಯ
೨೨.ಗ್ವಾಲಿಯರ್ ಟೈಗರ್ ಡ್ಯಾಂ
೨೩. ಪೂನಾದ ಖಡಕವಾಸ್ಲಾ ಜಲಾಶಯ
೨೪.ಹೈದರಾಬಾದಿನ ಒಳಚರಂಡಿ ವ್ಯವಸ್ಥೆ
೨೫.ಹೈದರಾಬಾದಿನ ಮೂಸಿ ನದಿಯ ಯೋಜನೆ
ಪ್ರಶಸ್ತಿಗಳು:
೧೯೫೫ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ-ಭಾರತ ರತ್ನ
೧೯೧೫ ರಲ್ಲಿ ಬ್ರಿಟನ್ ಸರ್ಕಾರದ ನೈಟ್ ಹುಡ್
ಸೆಪ್ಟಂಬರ್ ೧೫ ಅವರ ಜನ್ಮದಿನ. ಈ ದಿನವನ್ನು "ಇಂಜನಿಯರ್ ದಿನ"ವನ್ನಾಗಿ ಆಚರಿಸುತ್ತೇವೆ.
ಮತ್ತೊಮ್ಮೆ ಕನ್ನಡನಾಡಿ ಹುಟ್ಟು ಬಾ ಚೇತನವೇ.......
ಉತ್ತಮ ವಿಷಯದ ಆಯ್ಕೆ; ಚೆಂದದ ವಿಚಾರ ವಿನಿಮಯ.. ಓದಿ ಸಂತೋಷವಾಯಿತು :o)
ಪ್ರತ್ಯುತ್ತರಅಳಿಸಿ